ETV Bharat / state

ಬಿಡದಿ‌ ಪುರಸಭೆ ಚುನಾವಣೆ: ಕಾಂಗ್ರೆಸ್-ಜೆಡಿಎಸ್​​ ಕಾರ್ಯಕರ್ತರ ನಡುವೆ ಮಾರಾಮಾರಿ

ಮತಗಟ್ಟೆ ಬಳಿ ಕಾಂಗ್ರೆಸ್​ ಮತ್ತು ಜೆಡಿಎಸ್​​ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಮತದಾರರೊಂದಿಗೆ ಮತ ಕೇಳುವ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ.

Fight between congress and JDS activists in Ramnagar
ಕಾಂಗ್ರೆಸ್- ಜೆಡಿಎಸ್​​ ಕಾರ್ಯಕರ್ತರ ನಡುವೆ ಮಾರಾಮಾರಿ
author img

By

Published : Dec 27, 2021, 11:41 AM IST

Updated : Dec 27, 2021, 12:56 PM IST

ರಾಮನಗರ: ಬಿಡದಿ‌ ಪುರಸಭೆ ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಮತದಾನದ ವೇಳೆ 1ನೇ ವಾರ್ಡ್​ನ ಮತಗಟ್ಟೆ ಬಳಿ ಕಾಂಗ್ರೆಸ್​ ಮತ್ತು ಜೆಡಿಎಸ್​​ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.

ಕಾಂಗ್ರೆಸ್- ಜೆಡಿಎಸ್​​ ಕಾರ್ಯಕರ್ತರ ನಡುವೆ ಮಾರಾಮಾರಿ

ಕಲ್ಲುಗೋಪಹಳ್ಳಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಜೆಡಿಎಸ್​​ ಕಾರ್ಯಕರ್ತ ಯಲ್ಲಪ್ಪ ಎಂಬವರ ಮೇಲೆ ಕಾಂಗ್ರೆಸ್​​ ಕಾರ್ಯಕರ್ತ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮತದಾರರೊಂದಿಗೆ ಮತ ಕೇಳುವ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಪೊಲೀಸರು ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: ಪರಿಷತ್ ಕದನದ ಬಳಿಕ ಲೋಕಲ್​​ ದಂಗಲ್: ಬೆಳಗಾವಿಯಲ್ಲಿ ಬಿರುಸಿನ ಮತದಾನ

ಅನಿತಾ ಕುಮಾರಸ್ವಾಮಿ ಮತದಾನ:

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಬಿಡದಿಯ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ವಾರ್ಡ್​ನಲ್ಲಿ ಮತದಾನ ಮಾಡಿದರು.

ಮಧ್ಯಾಹ್ನ 12 ಗಂಟೆವರೆಗೆ ಶೇ.20ರಷ್ಟು ಮತದಾನವಾಗಿದೆ.

Last Updated : Dec 27, 2021, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.