ETV Bharat / state

ರಾಮನಗರದಲ್ಲಿ ಮಗಳಿಂದಲೇ ತಂದೆ ಕೊಲೆ ಶಂಕೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

ತಂದೆ ತಲೆಗೆ ಗುದ್ದಲಿಯಿಂದ ಮಗಳೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮನಗರದಲ್ಲಿ ಜರುಗಿದೆ.

ತಂದೆಯನ್ನೆ ಕೊಲೆ ಮಾಡಿದ ಮಗಳು
ತಂದೆಯನ್ನೆ ಕೊಲೆ ಮಾಡಿದ ಮಗಳು
author img

By

Published : Jul 20, 2023, 10:04 PM IST

ರಾಮನಗರ : ಕ್ಷುಲ್ಲಕ ಕಾರಣಕ್ಕೆ ಮಗಳೇ ಜನ್ಮ ಕೊಟ್ಟ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ನಾಯಿದೊಳ್ಳೆ ಗ್ರಾಮದಲ್ಲಿ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹುಚ್ಚೀರಯ್ಯ (68) ಮಗಳಿಂದಲೇ ಕೊಲೆಯಾದ ತಂದೆ. ಪುಷ್ಪ (30) ಹತ್ಯೆ ಮಾಡಿದ ಆರೋಪಿ ಮಗಳು.

ಆರೋಪಿ ಪುಷ್ಪ ಗಂಡನನ್ನು ಬಿಟ್ಟು ಬಂದು ಹಲವು ವರ್ಷಗಳಿಂದ ತಂದೆ ಮನೆಯಲ್ಲೇ ವಾಸವಿದ್ದರು. ಈಕೆ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇತ್ತೀಚೆಗೆ ತಂದೆ-ಮಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ಮಗಳು ಗುದ್ದಲಿಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ.

ಹೀಗಾಗಿ ತೀವ್ರ ರಕ್ತಸ್ರಾವದಿಂದ ತಂದೆ ಸ್ಥಳದಲ್ಲೇ ಸಾವನ್ನಪಿದ್ದಾರೆ. ಘಟನೆ ಬಳಿಕ ಆತಂಕಗೊಂಡ ಪುಷ್ಪಾ ಸ್ಥಳದಿಂದ ಪರಾರಿಯಾಗಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಚನ್ನಪಟ್ಟಣ ತಾಲೂಕಿನ ಎಂ.ಕೆ ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಗನ ಹುಟ್ಟುಹಬ್ಬದಂದು ಅಪ್ಪನ ಹತ್ಯೆ( ಬಳ್ಳಾರಿ) : ಕಳೆದ ರಾತ್ರಿ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ಕೆಆರ್​ಪಿಪಿ ಕಾರ್ಯಕರ್ತನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾರನ್ನು ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳ್ಳಾರಿ ನಿವಾಸಿ ಮೆಹಬೂಬ್ ಬಾಷಾ, ಕೆಆರ್​ಪಿಪಿ ಪಕ್ಷದ ಕಾರ್ಯಕರ್ತರಾಗಿದ್ದರು. ಮೆಹಬೂಬ್​ ಬಾಷಾ ಮಗನ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದರು.

ಇದನ್ನೂ ಓದಿ : ಕೆಆರ್​ಪಿಪಿ ಸದಸ್ಯನ ಕೊಲೆ... ಮಗನ ಜನ್ಮದಿನದಂದೇ ಪ್ರಾಣ ಬಿಟ್ಟ ತಂದೆ.. ಸದನದಲ್ಲಿ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ

ಈ ವೇಳೆ ಬೈಕ್​ನಲ್ಲಿ ಆಗಮಿಸಿದ್ದ ಮೂವರು ದುಷ್ಕರ್ಮಿಗಳು ಮೆಹಬೂಬ್​ ಬಾಷಾರನ್ನು ಹೊರಗೆ ಕರೆದಿದ್ದರು. ಬಳಿಕ ತಾವು ತಂದಿದ್ದ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹತ್ಯೆ ಮಾಡಿ ಪರಾರಿ​ ಆಗಿದ್ದರು. ಸದ್ಯ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳಾದ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಮೂವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಕ್ಯಾಶಿಯರ್​ಗೆ ಚಾಕು ಇರಿದು ಕೊಲೆ ( ಬೆಂಗಳೂರು): ಇನ್ನೊಂದು ಕಡೆ ಖಾಸಗಿ ಹೋಟೆಲ್ ಅಂಡ್​ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್​ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜೀವನ್​ ಭೀಮಾನಗರ ಮುರುಗೇಶ್​ ಪಾಳ್ಯದಲ್ಲಿ ನಡೆದಿದೆ. ಸುಭಾಷ್ ಕೊಲೆಯಾದ ದುರ್ದವಿ. ಹೊಟೇಲ್​ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದ್ದು, ಆರೋಪಿಗಾಘಿ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪತಿ: ತಲೆಮರೆಸಿಕೊಂಡಿರುವ ಆರೋಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.