ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ಕಗ್ಗಲಿಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸುರೇಶ್, ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿ ರಂಜಿತ ಹಾಗೂ ಆಕೆಯ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ವಿವರ:
ಫೇಸ್ಬುಕ್ನಲ್ಲಿ ರಂಜಿತ ಎಂಬುವವರು ನಾನು ಟಿವಿ ವಾಹಿನಿಯ ಸುದ್ದಿಗಾರ್ತಿ ಎಂದು ನಕಲಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿದ್ದಾಳೆ. ಈಕೆಗೆ ಕಳೆದ ಮೂರು ತಿಂಗಳ ಹಿಂದೆ ಹುಬ್ಬಳ್ಳಿ ಮೂಲಕ ಆರ್ಟಿಐ ಕಾರ್ಯಕರ್ತ ಶಿವಕುಮಾರ್ ಫೇಸ್ಬುಕ್ನಲ್ಲಿಯೇ ಪರಿಚಯವಾಗಿದ್ದಾನೆ.
ಇವರ ಪರಿಚಯ ದಿನಗಳೆದಂತೆ ಸಲುಗೆಗೆ ತಿರುಗಿ ಪರಸ್ಪರ ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದೆ. ಹೀಗೆ ಒಂದಿನ ರಂಜಿತ, ಶಿವಕುಮಾರ್ನನ್ನು ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಲ್ಲಿಯಲ್ಲಿರುವ ಸಿಯಾನ್ ರೆಸ್ಟೋ ಕೆಫೆಗೆ ಕರೆಸಿಕೊಂಡಿದ್ದಾಳೆ. ನಂತರ ಈತನ ಮೇಲೆ ರಂಜಿತ ಹಾಗು ಸಹಚರರು ಹಲ್ಲೆ ನಡೆಸಿ, ಅದನ್ನು ವಿಡಿಯೋ ಮಾಡಿದ್ದಾರೆ. ಇಷ್ಟೆ ಅಲ್ಲದೇ ಶಿವಕುಮಾರ್ಗೆ 5 ಲಕ್ಷ ರೂ ಕೊಡುವಂತೆ ದಬಾಯಿಸಿದ್ದಾರೆ. ಆದ್ರೆ, ಶಿವಕುಮಾರ್ ಹಣ ಕೊಡುವುದಾಗಿ ಒಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಸದ್ಯ ಶಿವಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ರಂಜಿತಾ ಹಾಗೂ ಇತರರನ್ನು ಪೊಲೀಸರು ಹುಡುಕುತ್ತಿದ್ದಾರೆ.