ರಾಮನಗರ: ಯಾರೇ ಆಗಲಿ ರಾಜಕೀಯವಾಗಿ ಮಾತನಾಡಲಿ ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಸಿಂದಗಿ - ಹಾನಗಲ್ನಲ್ಲಿ ಬಿಜೆಪಿ ಗೆಲ್ಲುತ್ತದೆ, ನನಗೆ ಈ ಬಗ್ಗೆ ಮಾಹಿತಿ ಇದೆ. ಆದರೆ ಚುನಾವಣಾ ಪ್ರಚಾರ ಭರಾಟೆಯಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಬಾರದು. ಚುನಾವಣಾ ಬಿರುಸಿನಲ್ಲಿ ಆಯ ತಪ್ಪಿ, ಅಳತೆ ತಪ್ಪಿ ಮಾತನಾಡಿದ್ದಾರೆ, ಅದು ತಪ್ಪು ಎಂದರು.
ಇನ್ನು ಆರ್ಎಸ್ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದ ಅವರು, ನಾನು RSS ವಿಚಾರವಾಗಿ ಮಾತನಾಡಲ್ಲ, ಬೇರೆಯವರು ಮಾತನಾಡ್ತಾರೆ. ಅದರಲ್ಲೂ ಕುಮಾರಸ್ವಾಮಿ ಬಹಳ ಸ್ಪೀಡ್ನಲ್ಲಿ ಮಾತನಾಡ್ತಿದ್ದಾರೆ, ಯಾಕೆ ಅಂತಾ ಗೊತ್ತಿಲ್ಲ ಎಂದರು.
ಇನ್ನು ಸರ್ಕಾರಿ ಬಂಗಲೆ ನಮ್ಮ ಸ್ವಂತದಲ್ಲ, ಹಾಗಾಗಿ ಖಾಲಿ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಗುವ ಬಗ್ಗೆ ಗೊತ್ತಿಲ್ಲ ಎಂದು ಇದೇ ವೇಳೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.