ETV Bharat / state

ರಾಮನಗರ: ವಿದ್ಯುತ್ ಪ್ರವಹಿಸಿ ಆನೆ ಸಾವು - 25 ವರ್ಷದ ಗಂಡಾನೆ ಸಾವು

ಜಮೀನಿನಲ್ಲಿ ಭತ್ತ ಮತ್ತು ರಾಗಿ ಫಸಲು ರಕ್ಷಣೆಗಾಗಿ ಜಮೀನಿನ ಸುತ್ತಲೂ ಬಿಟ್ಟಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟ ದುರ್ಘಟನೆ ಕನಕಪುರ ತಾಲೂಕಿನ ಮುಗ್ಗೂರು ಅರಣ್ಯ ಪ್ರದೇಶದ ಮರಳೀಪುರ ಗ್ರಾಮದಲ್ಲಿ ನಡೆದಿದೆ.

elephant
elephant
author img

By

Published : Jun 20, 2021, 9:29 PM IST

ರಾಮನಗರ:ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಮುಗ್ಗೂರು ಅರಣ್ಯ ಪ್ರದೇಶದ ಮರಳೀಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.

ಬನ್ನಿಮುಕ್ಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮರಳೀಪುರ ಗ್ರಾಮದ ರುದ್ರೇಗೌಡ ಮತ್ತು ಮತ್ತಿತರರಿಗೆ ಸೇರಿದ ಜಮೀನಿನಲ್ಲಿ ಭತ್ತ ಮತ್ತು ರಾಗಿ ಫಸಲು ರಕ್ಷಣೆಗಾಗಿ ಜಮೀನಿನ ಸುತ್ತಲೂ ಬಿಟ್ಟಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ.

ಸುಮಾರು 25 ವರ್ಷದ ಗಂಡಾನೆ ಸಾವಿಗೀಡಾಗಿದ್ದು, ಇಂದು ಬೆಳಗ್ಗೆ ಜಮೀನಿನ ಕಡೆ ಹೋದವರು ಆನೆ ಸತ್ತಿರುವುದನ್ನು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಸರ್ಕಲ್ ಇನ್ಸ್​​ಪೆಕ್ಟರ್ ಟಿ.ಟಿ.ಕೃಷ್ಣ ಪಿಎಸ್‌ಐ ಅನಂತರಾಮ್ ಹಾಗೂ ಬೆಸ್ಕಾಂ ವಿಚಕ್ಷಣ ದಳದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.