ETV Bharat / state

ರಾಮನಗರ: ಸ್ವಂತ ಹಣದಲ್ಲಿ 20 ಆಕ್ಸಿಜನ್ ಪಾಯಿಂಟ್ ಅಳವಡಿಸಿದ ಸರ್ಕಾರಿ ವೈದ್ಯ

ರಾಮನಗರ ಜಿಲ್ಲೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯ ಡಾ. ರಾಜ್ ಕುಮಾರ್ ತಮ್ಮ ಸಂಬಳದ ಹಣವನ್ನು ಖರ್ಚು ಮಾಡಿ ಸುಮಾರು 20 ಅಕ್ಸಿಜನ್ ಪಾಯಿಂಟ್​ಗಳನ್ನು ಅಳವಡಿಸಿ ಇತರರಿಗೆ ಮಾದರಿಯಾಗಿದ್ದಾರೆ.

Ramnagar
ಸ್ವಂತ ಹಣದಲ್ಲಿ 20 ಆಕ್ಸಿಜನ್ ಪಾಯಿಂಟ್ ಅಳವಡಿಸಿದ ಸರ್ಕಾರಿ ವೈದ್ಯ
author img

By

Published : May 20, 2021, 1:51 PM IST

ರಾಮನಗರ: ಸರ್ಕಾರಿ‌ ಆಸ್ಪತ್ರೆ ಎಂದರೆ ರೋಗಿಗಳನ್ನ ನಿರ್ಲಕ್ಷ್ಯ ‌ಮಾಡುತ್ತಾರೆ. ಸರಿಯಾದ ನಿರ್ವಹಣೆ ಮಾಡುವುದಿಲ್ಲ.‌ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ.‌ ಸೇವಾ ಮನೋಭಾವನೆ ಇರೋದಿಲ್ಲ ಎಂಬ ಆರೋಪಗಳು ಸರ್ಕಾರಿ ವೈದ್ಯರಿಗೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಈ ನಡುವೆ ಇಲ್ಲೊಬ್ಬ ವೈದ್ಯ ತಮ್ಮ ಸ್ವಂತ ಹಣ 2 ಲಕ್ಷ ರೂ. ಖರ್ಚು ಮಾಡಿ ಕೊರೊನಾ ಸೋಕಿಂತರಿಗೆ ನೆರವಾಗಿದ್ದಾರೆ.

Ramnagar
ಸ್ವಂತ ಹಣದಲ್ಲಿ ಆಕ್ಸಿಜನ್ ಪಾಯಿಂಟ್ ಅಳವಡಿಸಿದ ಸರ್ಕಾರಿ ವೈದ್ಯ

ಹೌದು, ವೈದ್ಯ ಡಾ. ರಾಜ್ ಕುಮಾರ್ ಅವರು ಸೋಂಕಿತರಿಗೆ ಅಕೂಲವಾಗಲೆಂದು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪಾಯಿಂಟ್ ಅಳವಡಿಸಿದ್ದಾರೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ರಾಜ್ ಕುಮಾರ್ ತಮ್ಮ ಸಹೋದರ ಶ್ರೀನಿವಾಸ್ ಜೊತೆಗೂಡಿ ವಾಯು ಸಂಜೀವಿನಿ ಎಂಬ ಹೆಸರಿನಡಿಯಲ್ಲಿ ತಮ್ಮ ಸ್ವಂತ ‌2 ಲಕ್ಷ ರೂ. ಖರ್ಚು ಮಾಡಿ ತುರ್ತು ‌ಚಿಕಿತ್ಸಾ ಘಟಕಕ್ಕೆ 20 ಆಕ್ಸಿಜನ್ ಪಾಯಿಂಟ್​​ಗಳನ್ನು ಅಳವಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

100 ಬೆಡ್​ಗಳಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್​​ಗಳನ್ನು ಕೊರೊನಾ ಸೋಂಕಿತರಿಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ 30 ಬೆಡ್​​ಗಳಿಗೆ ಮಾತ್ರ ಆಕ್ಸಿಜನ್ ಪಾಯಿಂಟ್​​​ಗಳನ್ನ ಅಳವಡಿಸಿ ತೀವ್ರ ಉಸಿರಾಟ ತೊಂದರೆ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದಂತೆ 20 ಬೆಡ್​​ಗಳಿಗೂ ಅನುಕೂಲವಾಗುವಂತೆ ಡಾ. ರಾಜ್ ಕುಮಾರ್ ತಮ್ಮ ಸ್ವಂತ ಹಣ ಖರ್ಚು ಮಾಡಿ ಆಕ್ಸಿಜನ್ ಪಾಯಿಂಟ್​​ಗಳನ್ನ ಅಳವಡಿಸಿದ್ದಾರೆ.

ತುರ್ತು ಸ್ಥಿತಿಗೆ ಅನುಕೂಲ ಈ ಆಕ್ಸಿಜನ್ ಪಾಯಿಂಟ್:

ತೀವ್ರ ಉಸಿರಾಟದ ತೊಂದರೆ ಇರುವವರಿಗೆ ಈ ಹೆಚ್ಚುವರಿ ಆಕ್ಸಿಜನ್ ಪಾಯಿಂಟ್​​ಗಳಿಂದ ತುಂಬಾ ಅನುಕೂಲವಾಗುತ್ತಿದೆ. ಕೇವಲ 30 ಜನರಿಗೆ ಬಿಟ್ಟರೆ ಉಳಿದಂತೆ ರಾಮನಗರ ಕೋವಿಡ್ ಆಸ್ಪತ್ರೆಗೆ ಅಥವಾ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕಳುಹಿಸಬೇಕಿತ್ತು. ಈಗ ಹೆಚ್ಚುವರಿಯಾಗಿ ಇಲ್ಲಿಯೇ ಆಕ್ಸಿಜನ್ ಪಾಯಿಂಟ್​​ಗಳನ್ನ ಮಾಡುವ ಮೂಲಕ ಮತ್ತಷ್ಟು ಜನರ ಜೀವ ಉಳಿಸಲು ಅನುಕೂಲವಾಗಿದೆ. ಉಳಿದಂತೆ ರಾಮನಗರ ಜಿಲ್ಲಾಡಳಿತ ಅನುಮತಿ ನೀಡಿದ್ರೆ ರಾಮನಗರ ಕೋವಿಡ್ ಆಸ್ಪತ್ರೆಗೂ ತಮ್ಮ ಸಹೋದರನ ಜೊತೆ ಚರ್ಚಿಸಿ ವಾಯು ಸಂಜೀವಿನಿ ಹೆಸರಿನಡಿ ಆಕ್ಸಿಜನ್ ಪಾಯಿಂಟ್​​ಗಳನ್ನ ಅಳವಡಿಸಿಕೊಳ್ಳಬಹುದು ಎಂದು ವೈದ್ಯ ಡಾ. ರಾಜ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಕಳಕಳಿ ಮೆರೆಯುತ್ತಿರುವ ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಬೆಂಗಳೂರಿನಲ್ಲಿ ಲಸಿಕೆಗಾಗಿ ಮುಂದುವರೆದ ಪರದಾಟ: ಕೆ.ಸಿ ಜನರಲ್ ಆಸ್ಪತ್ರೆ ಗೇಟ್ ಬಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.