ರಾಮನಗರ: ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ, ಕಾದು ನೋಡೋಣ ಮುಂದೆ ಏನಾಗುತ್ತದೆ ಅಂತ. ಆದ್ರೆ, ಸದ್ಯಕ್ಕೆ ನಾವು ಮೇಕೆದಾಟು ಪಾದಯಾತ್ರೆ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ 9 ರಿಂದ 19 ರ ವರೆಗೆ ಕೋವಿಡ್ ನಿಯಮ ಜಾರಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕೊರೊನಾ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್ ಪ್ರಾರಂಭವಾಗಿದೆ ಎಂದು ಲೇವಡಿ ಮಾಡಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಿ.ಕೆ.ಬ್ರದರ್ಸ್ ಹೊರಟ್ಟಿದ್ದಾರೆ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಖಂಡಿತ ಅವರಷ್ಟು ನನಗೆ ರಾಜಕೀಯ ಗೊತ್ತಿಲ್ಲ. ಸಿಪಿವೈ ಕನಕಪುರದಲ್ಲೂ ಸ್ಪರ್ಧೆಗೆ ಸಿದ್ಧ ಎಂದು ಕೂಡ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಯಾರು ಎಲ್ಲಿ ಬೇಕಾದರೂ ನಿಲ್ಲಬಹುದೆಂದು ಸಂವಿಧಾನ ಹೇಳುತ್ತದೆ. ಯಾರು ಎಲ್ಲಿ ಬೇಕಾದ್ರು ನಿಲ್ಲಬಹುದು. ಅವರು ಮಂತ್ರಿಯಾಗಲಿ ಎಂದು ಆಶಿಸುತ್ತೇನೆ. ಜಿಲ್ಲೆಗೆ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ ಕೂಡ ಎಂದರು.
ಓದಿ:ಒಮಿಕ್ರಾನ್ ಸೌಮ್ಯ ಗುಣಲಕ್ಷಣಗಳನ್ನು ಹೊಂದಿದೆ ಎಂಬುದೇ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ
ಡಿ.ಕೆ. ಸುರೇಶ್ ರೌಡಿ ವರ್ತನೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಂದಿನ ಘಟನೆಯನ್ನ ಇಡೀ ರಾಜ್ಯದ ಜನ ನೋಡಿದ್ದಾರೆ. ಅವ್ರು ಕೂಡ ವೇದಿಕೆ ಮೇಲೆ ಇದ್ದರು. ಅವರೇ ಎದ್ದು ಜಿಲ್ಲೆಯ ಗೌರವ ಕಾಪಾಡಬಹುದಿತ್ತು. ಏಕೆ ಸುಮ್ಮನೆ ನಗುತ್ತಾ ಕುಳಿತ್ತಿದ್ದರು ಎಂದು ಟಾಂಗ್ ಕೊಟ್ಟರು.
ಓದಿ: ಕೇವಲ 10 ದಿನಗಳಲ್ಲಿ 9 ಸಾವಿರದಿಂದ ಲಕ್ಷಕ್ಕೆ ಏರಿಕೆ ಕಂಡ ಕೋವಿಡ್ ಪ್ರಕರಣಗಳು... ಹೊಸ ತಳಿಗೆ ತತ್ತರಿಸುತ್ತಿರುವ ದೇಶ!
ಮೇಕೆದಾಟು ಪಾದಯಾತ್ರೆ ಮಾಡಿದ್ರೆ ಮುಂದಿನ ಬಾರಿ ಸರ್ಕಾರ ಬರಲ್ಲ ಎಂದು ಸಿಪಿವೈ ಹೇಳಿದ್ದಾರೆ. ಸರ್ಕಾರ ಬರಲಿ ಎಂದು ಪಾದಯಾತ್ರೆ ಹಮ್ಮಿಕೊಂಡಿಲ್ಲ. ನೀರು ಉಳಿತಾಯವಾಗಲಿ, ಜನರಿಗೆ ಕುಡಿಯುವ ನೀರು ಸಿಗಲಿ ಎಂದು ಪಾದಯಾತ್ರೆ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬರಲಿ ಅಂತ ಹೇಳ್ತಾನು ಇಲ್ಲ. ನಾವು ಹಗಲು ಕನಸು ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.