ETV Bharat / state

ಗೃಹ ಸಚಿವ ಆರಗ ಅಜ್ಞಾನದ ಜ್ಞಾನೇಂದ್ರರಾಗಿದ್ದಾರೆ: ಡಿಕೆ ಶಿವಕುಮಾರ್ ಟೀಕಾಪ್ರಹಾರ

ಕಾಂಗ್ರೆಸ್​ ಪಕ್ಷದಿಂದ ನಡೆಯುತ್ತಿರುವ ಎರಡನೇ ದಿನದ ಮೇಕೆದಾಟು ಪಾದಯಾತ್ರೆಯು ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುರುವಾಗಿದೆ.

dk-shivakumar-statement-on-home-minister-araga-jnanendra
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ಧಾಳಿ
author img

By

Published : Jan 10, 2022, 12:13 PM IST

ರಾಮನಗರ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಜ್ಞಾನದ ಜ್ಞಾನೇಂದ್ರರಾಗಿದ್ದಾರೆ.‌ ಪಾದಯಾತ್ರೆ ಮಾಡದಂತೆ ನಮಗೆ ನೋಟಿಸ್ ನೀಡಿದ್ದಾರೆ. ಅಲ್ಲದೇ ನಮ್ಮ ಮೇಲೆ ಎಫ್​ಐಆರ್ ಅಸ್ತ್ರ ಬಳಸಿದ್ದಾರೆ. ಆದರೆ, ಇದ್ಯಾವುದಕ್ಕೂ ನಾವು ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಪಕ್ಷದಿಂದ ನಡೆಯುತ್ತಿರುವ ಎರಡನೇ ದಿನದ ಮೇಕೆದಾಟು ಪಾದಯಾತ್ರೆಯು ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.

ನಿನ್ನೆ ಕನಕಪುರದ ಕಾವೇರಿ ಸಂಗಮದ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಚಾಲನೆ ಸಿಕ್ಕಿತ್ತು. ಪಾದಯತ್ರೆಯ ಆರಂಭದಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಜ್ವರದ ಹಿನ್ನೆಲೆಯಲ್ಲಿ ಬಳಿಕ ತೊರೆದು ಬೆಂಗಳೂರಿಗೆ ತೆರಳಿದ್ದಾರೆ. ನಂತರ ನಿನ್ನೆ ಡಿಕೆಶಿ ಸಾರಥ್ಯದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಶಿವಕುಮಾರ್​ ಹುಟ್ಟೂರು ದೊಡ್ಡ ಆಲಹಳ್ಳಿ ಗ್ರಾಮಕ್ಕೆ ತಲುಪಿದ್ದ ಪಾದಯಾತ್ರೆಯು ಇಂದು ಮತ್ತೆ ಆರಂಭಗೊಂಡಿದೆ.

ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ‌ಮಾತನಾಡಿದ ಡಿಕೆಶಿ, ಪಾದಯಾತ್ರೆ ನಿಲ್ಲಿಸಿಲು ಬಿಜೆಪಿ ಸರ್ಕಾರ ಶತಪ್ರಯತ್ನ ಮಾಡುತ್ತಲೇ ಇದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ, ನಾವು ಒಂದು ಹೆಜ್ಜೆ ಮುಂದೆ ಇಟ್ಟಾಗಿದ್ದು, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಗುಡುಗಿದರು.

ಕೋವಿಡ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಜಾಸ್ತಿ ಟೆಸ್ಟ್ ಮಾಡಿಸುತ್ತಿದ್ದಾರೆ. ಜನರಿಗೆ ತೊಂದರೆ ಕೊಡಲು ವಾರಾಂತ್ಯದ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲು ಮಾಡಲಿ. ಈ ಹಿಂದೆ ಕೂಡ ಹಲವು ಬಿಜೆಪಿ ನಾಯಕರು‌ ಕೂಡ ಕೋವಿಡ್​​ ನಿಯಮ ಉಲ್ಲಂಘಿಸಿದ್ದಾರೆ. ಅವರ ಮೇಲೆಯೂ ಪ್ರಕರಣ ದಾಖಲಿಸಬೇಕು ಎಂದು ಎಂದು ಡಿಕೆಶಿ ಆಗ್ರಹಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.