ರಾಮನಗರ: ನಾನು ಫಿಟ್ ಅಂಡ್ ಫೈನ್ ಆಗಿದ್ದೇನೆ. ಯಾವುದೇ ಕಾರಣಕ್ಕೂ ಕೊರೊನಾ ಟೆಸ್ಟ್ ಮಾಡಿಸಲ್ಲ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ಕೊನೆಗೂ ಟೆಸ್ಟ್ಗೆ ಒಪ್ಪಿಕೊಂಡಿದ್ದಾರೆ. ವೈದ್ಯರ ತಂಡವು ಕನಕಪುರದಲ್ಲಿರುವ ಡಿಕೆಶಿ ಮನೆಗೆ ತೆರಳಿ ಕೊರೊನಾ ಸ್ವಾಬ್ ಸ್ಯಾಂಪಲ್ ಪಡೆದುಕೊಂಡಿದೆ.
ಇತ್ತೀಚಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಡಿಕೆ ಶಿವಕುಮಾರ್ ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಸ್ವಾಬ್ ಸ್ಯಾಂಪಲ್ ನೀಡಿದ್ದಾರೆ. ಕನಕಪುರ ತಾಲೂಕು ವೈದ್ಯರ ತಂಡ ಸ್ವಾಬ್ ಸ್ಯಾಂಪಲ್ ತೆಗೆದುಕೊಂಡಿದೆ.
ಅಲ್ಲದೇ ಪಾದಯಾತ್ರೆ ನಡೆಸದಂತೆ ನೋಟಿಸ್ ನೀಡಲು ಡಿಕೆಶಿ ಮನೆಗೆ ಎಸಿ ಹಾಗೂ ಡಿವೈಎಸ್ಪಿ ಬಂದಿದ್ದರು. ಆದರೆ ನೋಟಿಸ್ ತೆಗೆದುಕೊಳ್ಳಲು ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕನಕಪುರ ಮನೆಯ ಮುಂಭಾಗ ನೋಟಿಸ್ ಅಂಟಿಸಿದ್ದಾರೆ.
(ಇದನ್ನೂ ಓದಿ: 'ನಾನು ಯಾವ ಟೆಸ್ಟೂ ಕೊಡೋದಿಲ್ಲ, ಫಿಟ್&ಫೈನ್ ಆಗಿದ್ದೀನಿ, ಬೇಕಾದ್ರೆ ನಿಮ್ಮ ಹೋಂ ಮಿನಿಸ್ಟರ್‌ನ ಕಳ್ಸಿ ಹೊತ್ಕೊಂಡು ಹೋಗ್ತೀನಿ')