ETV Bharat / state

ಡಿಕೆ ಬ್ರದರ್ಸ್ ವತಿಯಿಂದ ರಾಮನಗರದಲ್ಲಿ ಆರೋಗ್ಯ ಕಿಟ್ ವಿತರಣೆ - ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್

ಕೊರೊನಾ ತಗುಲಿ ಹೋಂ ಐಸೋಲೇಶನ್​ ಆಗಿರುವ ರೋಗಿಗಳಿಗೆ ರಾಮನಗರದಲ್ಲಿ ಡಿ.ಕೆ.ಎಸ್. ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ನೀಡಲಾಗುತ್ತಿದೆ.

DK Brothers distributes  health  kit in Ramanagara
ಡಿಕೆ ಬ್ರದರ್ಸ್ ವತಿಯಿಂದ ರಾಮನಗರದಲ್ಲಿ ಆರೊಗ್ಯ ಕಿಟ್ ವಿತರಣೆ
author img

By

Published : May 22, 2021, 5:24 PM IST

ರಾಮನಗರ: ಕೊರೊನಾ ಅಬ್ಬರದ ನಡುವೆ ರಾಮನಗರ ಜಿಲ್ಲೆಯ ಜನರಿಗೆ ಡಿಕೆ ಬ್ರದರ್ಸ್ ನೆರವಾಗಿದ್ದಾರೆ. ಜನತೆಗೆ ಮೆಡಿಕಲ್​ ಕಿಟ್ ವಿತರಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಈ ಸಂದರ್ಭದಲ್ಲಿ ಮೊದಲನೇ ಅಲೆಗಿಂತಲೂ ಹೆಚ್ಚಾಗಿ ಎರಡನೇ ಅಲೆ ತೀರಾ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ಸಲುವಾಗಿ ಡಿ.ಕೆ.ಎಸ್. ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ನೀಡಲಾಗುತ್ತಿದೆ.

ಹೆಲ್ತ್ ಕಿಟ್​ನಲ್ಲಿ ಒಂದು ಥರ್ಮಾಮೀಟರ್, ಪಲ್ಸ್ ಆಕ್ಸಿಮೀಟರ್, 2 ಮಾಸ್ಕ್, 1 ಸ್ಯಾನಿಟೈಸರ್ ಬಾಟಲ್ ಜೊತೆಗೆ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾತ್ರೆಗಳನ್ನ ನೀಡಲಾಗುತ್ತಿದೆ. ಡಿ.ಕೆ. ಬ್ರದರ್ಸ್ ಸಮಾಜಮುಖಿ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.