ETV Bharat / state

ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಜ್ಜಾದ ಶಿಕ್ಷಣ ಇಲಾಖೆ - undefined

ಇಷ್ಟು ದಿನ ಬೇಸಿಗೆ ರಜೆಯಲ್ಲಿ ಮಜಾ ಮಾಡುತ್ತಿದ್ದ ಮಕ್ಕಳನ್ನು ಈಗ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ವಿನೂತನ ಪ್ರಯತ್ನ ಮಾಡಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಮದುವೆ ಮನೆಯಂತೆ ಸಿಂಗಾರಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಅಣಿಯಾಗಿದೆ.

ಶಾಲೆ
author img

By

Published : May 28, 2019, 4:14 PM IST

ರಾಮನಗರ: ಕಳೆದ ಒಂದೂವರೆ ತಿಂಗಳಿನಿಂದ ರಜೆಯಲ್ಲಿ ಜಾಲಿಯಾಗಿದ್ದ ಚಿಣ್ಣರು ಮೇ.29 ಶಾಲೆಗಳಿಗೆ ಮರಳಬೇಕಿದೆ. ಬೇಸಿಗೆ ರಜೆಯ ಮಜಾ ಮುಗಿಸಿ ನಾಳೆಯಿಂದ ಶಾಲೆಯತ್ತ ಮಕ್ಕಳು ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.

ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಜ್ಜಾದ ಶಿಕ್ಷಣ ಸಂಸ್ಥೆಗಳು

ಅಷ್ಟೇ ಅಲ್ಲದೆ, ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ಧರಾಗಿದ್ದಾರೆ.

ದಾಖಲಾತಿ ಆಂದೋಲನ ಇನ್ನೂ ಒಂದು ತಿಂಗಳ ಕಾಲ ನಡೆಯಲಿದೆ. ಹಾಗಾಗಿ ಅಂತಿಮ ಮಕ್ಕಳ ದಾಖಲಾತಿ ಸಂಖ್ಯೆ ಪಟ್ಟಿ ಸಿದ್ದಗೊಂಡಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿ ತರಬೇತಿ ನೀಡಲಾಗಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಡಿಡಿಪಿಐ ಗಂಗಮಾರೇಗೌಡ ಈಗಾಗಲೇ ಮನವಿ ಮಾಡಿದ್ದಾರೆ.

ಮೇ 28ರಂದು ಶಿಕ್ಷಕರು ಪ್ರಾರಂಭೋತ್ಸವಕ್ಕೆಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಇಲಾಖೆಯು ಶಿಕ್ಷಕರಿಗೆ ಸೂಚಿಸಿದೆ.

ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ‌ ನೀಡಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಂದೇಶ ನೀಡಿದ್ದು ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್ ನೀಡುವ ಕುರಿತು ತಿಳಿಸಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ದಾಖಲಾತಿ ಆಂದೋಲನದ ನಂತರವೂ ಅಂತಹ ಮಗು ಕಂಡು ಬಂದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು 1098ಗೆ ಉಚಿತ ಸಹಾಯವಾಣಿಗೆ ಮಾಹಿತಿ ನೀಡುವಂತೆ ಡಿಡಿಪಿಐ ಗಂಗಮಾರೇಗೌಡ ತಿಳಿಸಿದ್ದಾರೆ.

ರಾಮನಗರ : ಕಳೆದ ಒಂದುವರೆ ತಿಂಗಳಿನಿಂದ ರಜೆಯ ಮಜೆಯಲ್ಲಿದ್ದ ಚಿಣ್ಣರುಗಳಿಗೆ ಮೇ.29 ಶಾಲೆಗಳು ಪುನರಾರಂಭವಾಗಲಿವೆ, ಬೇಸಿಗೆ ರಜೆಯ ಮಜಾ ಮುಗಿಸಿ ಶಾಲೆಯತ್ತ ಹೆಜ್ಜೆಯಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ಧರಾಗಿದ್ದಾರೆ. ದಾಖಲಾತಿ ಆಂದೋಲನ ಇನ್ನು ಒಂದು ತಿಂಗಳ ಕಾಲ ನಡೆಯಲಿದೆ. ಹಾಗಾಗಿ ಅಂತಿಮ ಮಕ್ಕಳ ದಾಖಲಾತಿ ಸಂಖ್ಯೆ ಪಟ್ಟಿ ಸಿದ್ದಗೊಂಡಿಲ್ಲ. ಸರಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿ ತರಬೇತಿ ನೀಡಲಾಗಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಡಿಡಿಪಿಐ ಗಂಗಮಾರೇಗೌಡ ಈಗಾಗಲೇ ಮನವಿ ಮಾಡಿದ್ದಾರೆ. ಮೇ 28ರಂದು ಶಿಕ್ಷಕರು ಪ್ರಾರಂಭೋತ್ಸವಕ್ಕೆಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಇಲಾಖೆಯು ಶಿಕ್ಷಕರಿಗೆ ಸೂಚಿಸಲಾಗಿದೆ. ಒಂದರಿಂದ ಆರನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಮಕ್ಕಳಲ್ಲಿ‌ ನವೋಲ್ಲಾಸ ಮೂಡಿಸುವ ವಾತಾವರಣ ಮೂಡಿಸಿ ಇದು ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೆರಣೆ ನೀಡುತ್ತದೆ ಎಂದು ಇಲಾಖೆ ಸೂಚನೆ‌ ನೀಡಿದೆ. ಜಿಲ್ಲಾದ್ಯಂತ ಹಬ್ಬದ ವಾತಾವರಣದಡಿ ಶೈಕ್ಷಣಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ಮಂಗಳವಾರ ಶಾಲೆಗಳಲ್ಲಿ ಶಿಕ್ಷಕರು ಸಿದ್ಧತಾ ಕಾರ್ಯ ನಡೆಸಬೇಕಾಗಿದ್ದು, ಬುಧವಾರ ಶಾಲೆಗೆ ಬರುವ ಮಕ್ಕಳನ್ನು ಆಹ್ವಾನಿಸಲು ಅದರಂತೆ ಜಿಲ್ಲೆಯ ಒಟ್ಟು 1,763 ಶಾಲೆಗಳ ಪ್ರಾರಂಭೋತ್ಸವ ನಡೆಯುತ್ತಿದೆ. ಅಂದು ಇಡೀ ಜಿಲ್ಲೆಯ ಸರಕಾರಿ ಶಾಲೆಗಳು ಮದುವೆ ಮನೆಯಂತೆ ಸಿಂಗಾರಗೊಳ್ಳಲಿದ್ದು,ಮಕ್ಕಳ ಸ್ವಾಗತಕ್ಕೆ ಶಿಕ್ಷಕರು ಅಣಿಯಾಗುತ್ತಿದ್ದಾರೆ. ಮಕ್ಕಳ ವ್ಯಾಸಂಗದ ಅವಯಲ್ಲಿ ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿ ಹಬ್ಬದಂತೆ ಆಚರಿಸಿ ಅವರಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವುದೇ ಶಿಕ್ಷಣ ಇಲಾಖೆ ಉದ್ದೆಶವಾಗಿದ್ದು, ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ 1ರಿಂದ 7ನೇ ತರಗತಿವರೆಗಿನ ಸರಕಾರಿ ಪ್ರಾಥಮಿಕ ಶಾಲೆಗಳು ಒಟ್ಟು 1,255ಇವೆ, ಹಾಗೂ 107 ಸರಕಾರಿ ಪ್ರೌಢಶಾಲೆಗಳಿದ್ದು, ಇಲಾಖೆ ಮಾರ್ಗಸೂಚಿಯಂತೆ ಇಂದು ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸಲು ಸಿದ್ಧವಾಗಿವೆ. ಉಳಿದಂತೆ ಅನುದಾನಿತ 36 ಪ್ರಾಥಮಿಕ ಹಾಗೂ 74 ಪ್ರೌಢಶಾಲೆಗಳು, ಅನುದಾನರಹಿತ 151 ಪ್ರಾಥಮಿಕ ಹಾಗೂ 111 ಪ್ರೌಢಶಾಲೆಗಳು ಜಿಲ್ಲೆಯಲ್ಲಿದ್ದು, ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವಕ್ಕೆ ಸೂಚನೆ ನೀಡಿದ್ದರೂ, ಬಹುತೇಕ ಎಲ್ಲಾ 262 ಖಾಸಗಿ ಶಾಲೆಗಳು ಮಾತ್ರ ಶಿಕ್ಷಣ ಇಲಾಖೆಯ ಸೂಚನೆಗೆ ಕಾಯದೇ ವಾರಕ್ಕೂ ಮುನ್ನವೇ ಶಾಲೆಗಳನ್ನು ಆರಂಭಿಸಿರುವುದು ವಿಶೇಷ. ಇವುಗಳ ಜತೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 30 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಇಲ್ಲಿಯೂ ಸಾವಿರಕ್ಕೂ ಮಕ್ಕಳು ಶಾಲೆಯತ್ತ ಇಂದಿನಿಂದ ಪಯಣ ಬೆಳೆಸಿದ್ದಾರೆ. ಇದರ ಜತೆಗೆ ಕನಕಪುರದಲ್ಲಿ ಒಂದು ನವೋದಯ ಹಾಗೂ ಚನ್ನಪಟ್ಟಣದಲ್ಲಿ 1 ಕೇಂದ್ರಿಯ ವಿದ್ಯಾಲಯ ಶಾಲೆಗಳು ಇದ್ದು, ಅವುಗಳಲ್ಲೂ ಮೇ 28 ರಂದೇ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ನಡೆಸಲು ಸೂಚಿಸಲಾಗಿದೆ. ಈ ಬಾರಿ ಸರಕಾರ ಜಿಲ್ಲೆಯಲ್ಲಿ 4 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, 16 ಸರಕಾರಿ ಶಾಲೆಗಳಲ್ಲಿ ಈ ಶಾಲೆಗಳಲ್ಲಿ ಪ್ರಿಕೆಜಿಯಿಂದ 10ನೇ ತರಗತಿವರೆಗೂ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಯ ರೀತಿಯಲ್ಲೆ ನೀಡಲು ಸಿದ್ಧತೆ ನಡೆಸಲಾಗಿದೆ. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ‌ ನೀಡಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೆಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಂದೇಶ ನೀಡಿದ್ದು ಮಕ್ಕಳಿಗೆ ಬಿಸಿಯೂಟ, ಕ್ಷಿರಭಾಗ್ಯ, ಉಚಿತ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್ ನೀಡುವ ಕುರಿತು ತಿಳಿಸಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ದಾಖಲಾತಿ ಆಂದೋಲನದ ನಂತರವೂ ಅಂತಹ ಮಗು ಕಂಡು ಬಂದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು 1098ಗೆ ಉಚಿತ ಸಹಾಯವಾಣಿಗೆ ಮಾಹಿತಿ ನೀಡುವಂತೆ ಡಿಡಿಪಿಐ ಗಂಗಮಾರೇಗೌಡ ತಿಳಿಸಿದ್ದಾರೆ. ಜಿಲ್ಲೆಯಾಧ್ಯಂತ ಇರುವ ಸರಕಾರಿ ಶಾಲೆಗಳ ವಿವರ ಕಿರಿಯ.ಪ್ರಾಥಮಿಕ.ಶಾಲೆ -808 ಹಿರಿಯ.ಪ್ರಾಥಮಿಕ.ಶಾಲೆ-447 ಪ್ರೌಢ ಶಾಲೆ-107 ಅನುದಾನಿತ ಶಾಲೆಗಳು ಕಿರಿಯ.ಪ್ರಾಥಮಿಕ.ಶಾಲೆ-1 ಹಿರಿಯ.ಪ್ರಾಥಮಿಕ.ಶಾಲೆ-25 ಪ್ರೌಢ ಶಾಲೆ-74 ಅನುದಾನ ರಹಿತ ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆ-24 ಹಿರಿಯ ಪ್ರಾಥಮಿಕ ಶಾಲೆ-217 ಪ್ರೌಢ ಶಾಲೆ-111 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆ-5 ಪ್ರೌಢಶಾಲೆ-30 ನವೋದಯ ಶಾಲೆ-1 ಕೇಂದ್ರಿಯ ವಿದ್ಯಾಲಯ-1

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.