ETV Bharat / state

ರಾಮನಗರದಲ್ಲಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಸಾವು, ಮಂಗಳಮುಖಿ ವಶಕ್ಕೆ - ಮಂಡ್ಯ ಮೂಲದ ಯುವಕನ ಹತ್ಯೆ

ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಪರಿಣಾಮ ಓರ್ವ ಮೃತಪಟ್ಟಿದ್ದರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಇದಕ್ಕೆ ಕಾರಣವಾದ ಮಂಗಳಮುಖಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಯುವಕರ ಮೇಲೆ  ಮಾರಣಾಂತಿಕ ಹಲ್ಲೆ: ಓರ್ವ ಸಾವು, ಮತ್ತೊಬ್ಬ ಗಂಭೀರ

author img

By

Published : Jan 25, 2022, 5:28 PM IST

Updated : Jan 25, 2022, 6:13 PM IST

ರಾಮನಗರ: ಹಳೆ ವೈಷಮ್ಯ ಗಲಾಟೆಗೆ ತಿರುಗಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.

ಮಂಡ್ಯ ಮೂಲದ ಆನಂದ್ ಎಂಬ ಯುವಕ ಮೃತಪಟ್ಟಿದ್ದು, ರಾಘವೇಂದ್ರ ಎಂಬ ಯುವಕನ ಸ್ಥಿತಿ ಗಂಭೀರವಾಗಿದೆ. ಆತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಈ ಇಬ್ಬರು ಯುವಕರು ಲಾಳಗಟ್ಟದವರಾಗಿದ್ದು ಈ ಹಿಂದೆ ಪರಿಚಯವಿದ್ದ ಮಂಗಳಮುಖಿ ಮನೆಗೆ ಬಂದಿದ್ದರು. ಮನೆಯಲ್ಲಿ ಮಂಗಳಮುಖಿಗೂ ಹಾಗೂ ಈ ಯುವಕರಿಬ್ಬರಿಗೂ ಗಲಾಟೆಯಾಗಿದೆಯಂತೆ. ನಂತರ ಮಂಗಳಮುಖಿ ತನ್ನ ಸಂಬಂಧಿ ಗುರು ಎಂಬುವರಿಗೆ ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ನಂತರ ಗುರು ಹಾಗೂ ಈ ಇಬ್ಬರ ಯುವಕರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಈ ಇಬ್ಬರ ಮೇಲೆ ಮೆಚ್ಚಿನಿಂದ ಆತ ತೀವ್ರವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ. ನಂತರ ಸ್ಥಳದಲ್ಲೇ ಆನಂದ್ ಮೃತಪಟ್ಟರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ರಾಮನಗರದಲ್ಲಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ

ಲಾಳಘಟ್ಟ ಗ್ರಾಮದ ಘಟನಾ ಸ್ಥಳಕ್ಕೆ ಚನ್ನಪಟ್ಟಣ ಉಪವಿಭಾಗದ ಡಿವೈಎಸ್ಪಿ ಕೆ.ಎನ್ ರಮೇಶ್ ಚನ್ನಪಟ್ಟಣ ಗ್ರಾಮಾಂತರ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣರಾದ ಮಂಗಳಮುಖಿಯನ್ನ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಲಾಗುತ್ತಿದೆ. ಮಚ್ಚಿನಿಂದ ಹಲ್ಲೆ ಮಾಡಿದ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 25, 2022, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.