ETV Bharat / state

ರಾಮನಗರ: ಮೇರಿ ಮಾತೆ ಪ್ರತಿಮೆಗೆ ಡಿಕೆಶಿ ಪುಷ್ಪನಮನ

ರಾಮನಗರದ ಹಾರೋಬೆಲೆ ಗ್ರಾಮಕ್ಕೆ ಶನಿವಾರ ಸಂಜೆ ಡಿಸಿಎಂ ಡಿ.ಕೆ‌.ಶಿವಕುಮಾರ್ ಭೇಟಿ ನೀಡಿದರು.

author img

By ETV Bharat Karnataka Team

Published : Oct 8, 2023, 11:42 AM IST

DCM DK Shivakumar
ಡಿಸಿಎಂ ಡಿಕೆಶಿ
ಡಿಸಿಎಂ ಡಿಕೆಶಿ ಮಾತು

ರಾಮನಗರ: "ಮನುಷ್ಯ ಯಾವ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಪ್ರಪಂಚದ ಎಲ್ಲಾ ಧರ್ಮಗಳು ಹೇಳುವ ತತ್ವ ಒಂದೇ" ಎಂದು ಡಿಸಿಎಂ ಡಿ.ಕೆ‌.ಶಿವಕುಮಾರ್ ತಿಳಿಸಿದರು. ಹಾರೋಬೆಲೆ ಗ್ರಾಮದ ಸರ್ಕಲ್‌ನಲ್ಲಿರುವ ಮೇರಿ ಮಾತೆ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, "ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಮೇರಿ ಮಾತೆ ಎಲ್ಲರಿಗೂ ಆರೋಗ್ಯ ನೀಡಲಿ'' ಎಂದು ಪ್ರಾರ್ಥಿಸಿದರು‌.

"ನಾನು ಹಾರೋಬೆಲೆ ಗ್ರಾಮಕ್ಕೆ ಉಪ ಮುಖ್ಯಮಂತ್ರಿಯಾಗಿಯೋ ಅಥವಾ‌ ಶಾಸಕನಾಗಿಯೋ ಬಂದಿಲ್ಲ. ಸ್ಥಳೀಯ ಸಂಸ್ಥೆಯಿಂದ ಆಯ್ಕೆ ಮಾಡಿ ಉಪ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆಸಿದ್ದೀರಿ. 40 ವರ್ಷಗಳಿಂದ ರಾಜಕೀಯದಲ್ಲಿರಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ದೇವರು ವರ,‌ ಶಾಪ ಎರಡನ್ನೂ ನೀಡುವುದಿಲ್ಲ, ಬದಲಾಗಿ ಅವಕಾಶ ನೀಡುತ್ತಾನೆ. ಈ ಊರಿನ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಸಹಕಾರ ನೀಡುತ್ತದೆ" ಎಂದು ತಿಳಿಸಿದರು.

"ನಮ್ಮ ಗೆಳೆಯ ಆಗಣ್ಣ ಇದ್ದಿದ್ದರೆ ನನ್ನ ಹಾಗೂ ಸುರೇಶ್ ಅವರ ಬೆಳವಣಿಗೆ ಕಂಡು ಸಂತೋಷ ಪಡುತ್ತಿದ್ದರು. ಎರಡು ಹೋರಿ ಕರುಗಳನ್ನು ತಂದು ನಿಲ್ಲಿಸಿದ್ದೇನೆ ಎಂದು ಚುನಾವಣೆ ಹೊತ್ತಿನಲ್ಲಿ ನಮಗೆ ಬೆಂಬಲವಾಗಿ ನಿಂತು, ನಮ್ಮ ಬೆಳವಣಿಗೆಗೆ ಕಾರಣವಾದರು" ಎಂದು ಮಿತ್ರನನ್ನು ನೆನಪಿಸಿಕೊ‌ಂಡರು‌. "ಡಿ.ಕೆ.ಸುರೇಶ್ ಜನ್ಮ ನೀಡಿದ ಎರಡು ವರ್ಷಗಳ ನಂತರ, ನನ್ನ ತಂಗಿ ಹುಟ್ಟಿದ್ದು ಇದೇ ಊರಿನ ಆಸ್ಪತ್ರೆಯಲ್ಲಿ. ಈ ಊರು ನಮ್ಮ ಕ್ಷೇತ್ರಕ್ಕೆ ಮಾದರಿಯಾದ ಗ್ರಾಮ. ಅನೇಕ ವಿಚಾರಗಳಲ್ಲಿ ಈ ಊರು ಸಾಕ್ಷಿಗುಡ್ಡೆಯಾಗಿ ನಿಂತಿದೆ. ಇಡೀ ಊರಿನ ಜನರು, ಅದರಲ್ಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವ ನೀವು ನನ್ನ ಬೆಂಬಲವಾಗಿ ನಿಂತು ಕೈ ಹಿಡಿದಿದ್ದೀರಿ" ಎಂದು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಸಿಕ್ಕಿಂ ಪ್ರವಾಹದಲ್ಲಿ ತೆಲುಗು ಹಿರಿಯ ನಟಿ ಸರಳ ಕುಮಾರಿ ನಾಪತ್ತೆ: ತಾಯಿಯನ್ನು ಪತ್ತೆ ಹಚ್ಚುವಂತೆ ಮಗಳ ಮನವಿ

ಹಾರೋಬೆಲೆ ಗ್ರಾಮದ ಪವಿತ್ರ ಜಪಮಾಲೆ ರಾಣಿ ದೇವಾಲಯ (ಹೋಲಿ ರೋಜರಿ ಚರ್ಚ್) ಬೆಳ್ಳಿ ಮಹೋತ್ಸವ, ಸರ್ಕಲ್ ಮೇರಿ ಮಾತೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಡಿ.ಕೆ.ಶಿವಕುಮಾರ್ ನವೀಕೃತ ಸರ್ಕಲ್ ಮೇರಿ ಮಾತೆ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಡಿ.ಕೆ.ಸುರೇಶ್, ಎಂಎಲ್​ಸಿ ಎಸ್.ರವಿ, ಹೋಲಿ ರೋಜರಿ ಚರ್ಚ್​​ನ ಧಾರ್ಮಿಕ ಗುರು ವಂ.ಸ್ವಾಮಿ ಪ್ಯಾಟ್ರಿಕ್ ಎಡ್ವರ್ಡ್ ಪಿಂಟೋ ಸೇರಿದಂತೆ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಕರ್ನಾಟಕ, ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.