ETV Bharat / state

ದೆಹಲಿ ಗಲಭೆಗೆ ಬಿಜೆಪಿ ನಾಯಕರೇ ಕಾರಣ: ಡಿ.ಕೆ.ಸುರೇಶ್​​ ಆರೋಪ - ರಾಮನಗರ ಡಿ.ಕೆ ಸುರೇಶ್​ ಕಾರಣ

ಬಿಜೆಪಿ ಮುಖಂಡರ ಪ್ರಚೋದನೆಗಳೇ ಗಲಭೆಗೆ ಕಾರಣ. ಅಮಾಯಕರು ಗಲಭೆಯಲ್ಲಿ ಮೃತಪಟ್ಟಿದ್ದಾರೆ. ಗಲಭೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಬಿಜೆಪಿ ತನ್ನ ಮೇಲಿನ ತಪ್ಪನ್ನ ಮುಚ್ಚಿ ಹಾಕಲು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮೇಲೆ ಆರೋಪ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್​​ ಆಕ್ರೋಶ ವ್ಯಕ್ತಪಡಿಸಿದರು.

d-k-suresh
ಡಿ.ಕೆ ಸುರೇಶ್​ ಆರೋಪ
author img

By

Published : Feb 28, 2020, 7:34 PM IST

ರಾಮನಗರ: ದೆಹಲಿಯಲ್ಲಿ ನಡೆದ ಗಲಭೆ‌ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್​ಎಸ್​ಎಸ್ ಕಾರ್ಯಕರ್ತರೇ ನೇರ ಕಾರಣ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ಪ್ರಚೋದನೆಗಳೇ ಗಲಭೆಗೆ ಕಾರಣ. ಅಮಾಯಕರು ಗಲಭೆಯಲ್ಲಿ ಮೃತಪಟ್ಟಿದ್ದಾರೆ. ಗಲಭೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಬಿಜೆಪಿ ತನ್ನ ಮೇಲಿನ ತಪ್ಪನ್ನ ಮುಚ್ಚಿ ಹಾಕಲು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮೇಲೆ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಚಾರ. ಅದಕ್ಕಾಗಿ ಹೋರಾಟ ನಡೆಸಿದ ಆ ಭಾಗದ ರೈತರಿಗೆ ಸಿಕ್ಕ ಜಯ ಹಾಗೂ ಗೌರವ. ಕಾಲ ಹರಣ ಮಾಡದೇ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.

ಡಿ.ಕೆ.ಸುರೇಶ್​, ಸಂಸದ

ಸರ್ಕಾರ ಯೋಜನೆ ಕಾರ್ಯರೂಪಕ್ಕೆ ತಂದು ಸಂಪೂರ್ಣ ನೀರನ್ನ ಬಳಕೆ ಮಾಡಿಕೊಳ್ಳಬೇಕಿದೆ. ಮೇಕೆದಾಟು ಯೋಜನೆ ವಿಚಾರವಾಗಿ ನೀರಾವರಿ ಸಚಿವರ ಬಳಿ ಚರ್ಚೆ ಮಾಡಿದ್ದೇನೆ. ಸುಪ್ರೀಂ ಕೋರ್ಟ್​​ನಿಂದ ಯಾವುದೇ ತಡೆಯಾಜ್ಞೆ ಇಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಬ್ಯಾಲೆನ್ಸಿಂಗ್​ ರಿಸರ್ವೆಯರ್ ಮಾಡಲಿಕ್ಕೆ ಅವಕಾಶವಿದೆ.

ಕೇಂದ್ರದ ಮೇಲೆ ಒತ್ತಡ ತಂದು ಅನುಮತಿ ಪಡೆದು ಕಾಮಗಾರಿ ಮಾಡುವುದಕ್ಕೆ ನಮ್ಮ ಸಹಕಾರವಿದೆ. ರಾಜಕೀಯ ಏನೇ ಇದ್ದರೂ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಕೊಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.