ETV Bharat / state

ಕಾಂಗ್ರೆಸ್ ಮುಕ್ತ ಭಾರತದ ಜೊತೆಯಲ್ಲೇ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ: ಡಿಸಿಎಂ ಅಶ್ವತ್ಥ್​ನಾರಾಯಣ - ramanagar DCM AShwathhanarayan news

ಮಾಗಡಿಯಲ್ಲಿ ಇಂದು ಬೆಳಗ್ಗೆ ಹಿರಿಯ ಮುಖಂಡ ಹೆಚ್.ಎಂ. ಕೃಷ್ಣಮೂರ್ತಿ ಅವರನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್​ನಾರಾಯಣ ಅವರು ಬಿಜೆಪಿಗೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕತೆಯಲ್ಲಿ, ಜಾರಿಯಾಗುತ್ತಿರುವ ಯೋಜನೆಗಳಲ್ಲಿ ಪಾರದರ್ಶಕತೆ ಬಂದಿದೆ. ಈ ಕಾರಣದಿಂದ ಈ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಬೆಂಬಲಿಗರನ್ನು ತಮ್ಮ ತಮ್ಮ ಗ್ರಾಮಗಳಿಂದ ಹೊರ ಹಾಕಲಿದ್ದಾರೆಂದು ಹೇಳಿದರು.

ಡಿಸಿಎಂ ಅಶ್ವತ್ಥನಾರಾಯಣ
ಡಿಸಿಎಂ ಅಶ್ವತ್ಥನಾರಾಯಣ
author img

By

Published : Dec 10, 2020, 1:50 PM IST

ಮಾಗಡಿ (ರಾಮನಗರ): ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ. ಈ ಹಿನ್ನೆಲೆ ಕಾಂಗ್ರೆಸ್ ಮುಕ್ತ ಭಾರತದ ಗುರಿ ಸಾಧಿಸುವುದರ ಜೊತೆಯಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್​ನಾರಾಯಣ ಹೇಳಿದ್ದಾರೆ.

ಮಾಗಡಿಯಲ್ಲಿ ಬೆಳಗ್ಗೆ ಹಿರಿಯ ಮುಖಂಡ ಹೆಚ್.ಎಂ. ಕೃಷ್ಣಮೂರ್ತಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡ ನಂತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಪ್ರವಾಹದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಜನರ ನಾಡಿಮಿತಕ್ಕೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು.

ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ಬೇರೂರಿತ್ತು. ಅದನ್ನು ಈಗ ಬುಡಸಮೇತ ಕಿತ್ತೊಗೆಯಲಾಗುತ್ತಿದೆ. ಬಚ್ಚಿಟ್ಟಿದ್ದ ಕಪ್ಪು ಹಣ ರಾಶಿರಾಶಿಯಾಗಿ ಹೊರಬರುತ್ತಿದೆ. ದೇಶದ ಆರ್ಥಿಕತೆಯಲ್ಲಿ, ಜಾರಿಯಾಗುತ್ತಿರುವ ಯೋಜನೆಗಳಲ್ಲಿ ಪಾರದರ್ಶಕತೆ ಬಂದಿದೆ. ಈ ಕಾರಣದಿಂದ ಈ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಬೆಂಗಲಿಗರನ್ನು ತಮ್ಮ ತಮ್ಮ ಗ್ರಾಮಗಳಿಂದ ಹೊರ ಹಾಕಲಿದ್ದಾರೆಂದು ಹೇಳಿದರು.

ಬಿಜೆಪಿ ಎಲ್ಲರ ಪಕ್ಷ:

ಭಾರತೀಯ ಜನತಾ ಪಕ್ಷವು ಕೇವಲ ರಾಜಕೀಯ ಪಕ್ಷವಲ್ಲ. ಅದು ಸಮಸ್ತ ಭಾರತೀಯರ ಜನಜೀವನದ ಒಂದು ಭಾಗ. ನಮ್ಮತನವನ್ನು ಎತ್ತಿ ಹಿಡಿಯುವ ಪಕ್ಷ. ಪ್ರತಿಯೊಬ್ಬರಿಗೂ ಸಲ್ಲುವ ಏಕೈಕ ರಾಜಕೀಯ ಪಕ್ಷ, ಜನರ ಭಾವನೆಗಳನ್ನು ಗೌರವಿಸುತ್ತಿರುವ ಪಕ್ಷ ಮಾತ್ರ. ಸಿಐಎ, ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರದ 370 ರದ್ದು ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬಗೆಹರಿಸಿದ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಈ ಕಾರಣಕ್ಕಾಗಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಡಾ.ಅಶ್ವತ್ಥ್​​ನಾರಾಯಣ ಹೇಳಿದರು.

ಇದನ್ನು ಓದಿ:ಡೆಮಾಕ್ರಸಿಗೆ ಆದ ಅಪಮಾನದ‌ ಸೇಡನ್ನು ಈಗ ತೀರಿಸಿಕೊಂಡಿದ್ದೇವೆ: ಸಚಿವ ಆರ್. ಅಶೋಕ್

ಹೆಚ್.ಎಂ. ಕೃಷ್ಣಮೂರ್ತಿ ಹಿಂದೆ ನಮ್ಮ ಪಕ್ಷದಲ್ಲೇ ಇದ್ದರು. ನಂತರ ಮಾತೃ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಪಂಚಾಯತ್​ ಚುನಾವಣೆ ಹಿನ್ನೆಲೆ ಕೃಷ್ಣಮೂರ್ತಿ ಅವರ ಮರು ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ ಎಂದು ಡಿಸಿಎಂ ನುಡಿದರು.

ಇದೇ ವೇಳೆ ಮಾತನಾಡಿದ ಹೆಚ್.ಎಂ. ಕೃಷ್ಣಮೂರ್ತಿ, ಮಾತೃಪಕ್ಷ ಬಿಜೆಪಿಗೆ ಮರಳುತ್ತಿರುವುದು ಖುಷಿ ತಂದಿದೆ. ಇಡೀ ದೇಶದಲ್ಲಿ ಬಿಜೆಪಿಗೆ ಹೆಚ್ಚು ಮಾನ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಗಮೆಚ್ಚಿದ ಮಗ. ಅಂತಹ ಪಕ್ಷಕ್ಕೆ ಮರಳಿದ್ದು ಹೆಮ್ಮೆಯ ಸಂಗತಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.