ETV Bharat / state

ಚನ್ನಪಟ್ಟಣ ಬಸ್​ ನಿಲ್ದಾಣದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಪತ್ತೆ...!

ವಿದೇಶದಿಂದ ಆಗಮಿಸಿದ್ದ ಕೊರೊನಾ ಶಂಕಿತ ವ್ಯಕ್ತಿ ಇಂದು ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.

corona suspected
ಕೊರೊನಾ ಶಂಕಿತ ವ್ಯಕ್ತಿ
author img

By

Published : Mar 21, 2020, 10:14 PM IST

ರಾಮನಗರ: ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಇಂದು ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಯುಎಸ್ಎ ನಿಂದ ಇಂದು ಬೆಳಗ್ಗೆ ಆಗಮಿಸಿದ ಶಂಕರ್(58) ಎಂಬಾತ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ಡಿಎಚ್​ಒ ಯಾವುದೇ ಮಾಹಿತಿ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

ಚನ್ನಪಟ್ಟಣ ಬಸ್​ ನಿಲ್ದಾಣ

ಮೂಲತಃ ಕೇರಳ ಮೂಲದ ವ್ಯಕ್ತಿ USA ದಿಂದ ಇಂದು ಬೆಳಗ್ಗೆ ಬೆಂಗಳೂರಿನ ಏರ್ಪೋರ್ಟ್​ಗೆ ಬಂದಿಳಿದಿದ್ದರು. ಮೈಸೂರಿನ ನೆಸ್ಲೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.

ವಿದೇಶದಿಂದ ಬಂದಿದ್ದ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿ ಶಂಕೆಯಿಂದ ಕೈಗೆ ಸೀಲ್ ಹಾಕಿದ್ದರು. ಅಲ್ಲದೇ ಪ್ರತ್ಯೇಕ ವಾಹನದಲ್ಲಿ ತೆರಳಲು ಏರ್ಪೋರ್ಟ್ ಸಿಬ್ಬಂದಿ ಸೂಚಿಸಿದ್ದರು ಎನ್ನಲಾಗಿದೆ. ಆದರೂ ಕೆಎಸ್​ಆರ್​ಟಿಸಿ (ಐರಾವತ) ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದ ಶಂಕರ್ ಕೈಯಲ್ಲಿನ ಸೀಲ್ ನೋಡಿ ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ನಂತರ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಆ ವ್ಯಕ್ತಿಯನ್ನು ದಾಖಲು ಮಾಡಲಾಗಿದೆ ನಂತರ ಆ ವ್ಯಕ್ತಿ ಎಲ್ಲಿದ್ದಾನೆಂಬುದು ನಿಗೂಢವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ರಾಮನಗರ ಡಿಎಚ್ಒ ಡಾ.ನಿರಂಜನ್ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.