ETV Bharat / state

ಜೀವ ಜಲವಾಗಿದ್ದ ಕೆರೆಯ ಸುತ್ತಮುತ್ತ ದುರ್ವಾಸನೆ: ರೋಗಗಳ ಹುತ್ತವಾದ ಕಲುಷಿತ ನೀರು - Contaminated water

ಬೆಂಗಳೂರು ಬೆಳೆದಂತೆಲ್ಲ ಹಲವಾರು ಸಮಸ್ಯೆಗಳು ಸಹ ಹುಟ್ಟಿಕೊಳ್ಳುತ್ತಿವೆ. ಪ್ರಪಂಚದ‌ ಗಮನ ಸೆಳೆದ‌ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಲಿಕಾನ್​ ಸಿಟಿ ಇದೀಗ ಗಾರ್ಬೆಜ್​ ಸಿಟಿ ಅಂತ‌ ಕೂಡ‌ ಕರೆಸಿಕೊಂಡಿದೆ. ಇದಕ್ಕೆ ಹಲವುಕಾರಣಗಳು ಇವೆ.

ಬೆಂಗಳೂರಿನಿಂದ ಹರಿದು ಬರುತ್ತಿರುವ ಕಲುಷಿತ ನೀರು
author img

By

Published : May 14, 2019, 12:04 PM IST

ರಾಮನಗರ : ಬೆಂಗಳೂರಿನಿಂದ ಸಾಕಷ್ಟು ಪ್ರಮಾಣದಲ್ಲಿ ಕಲುಷಿತ ನೀರು ಹರಿದು ಬರುತ್ತಿದ್ದು, ರೇಷ್ಮೆ ನಗರಕ್ಕೆ ಜೀವ ಜಲವಾಗಿದ್ದ ಬೈರಮಂಗಲ ಕೆರೆ ಇಂದು ಮರಣ ಮೃದಂಗ ಬಾರಿಸುತ್ತಿದೆ..! ಇದೀಗ ಕೆರೆ ಸುತ್ತಮುತ್ತ ದುರ್ವಾಸನೆ ಬರುತ್ತಿದ್ದು ಇಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕು.

ಈ ಕೆರೆ ಅನಾದಿ‌ ಕಾಲದಿಂದ ಸಾಕಷ್ಟು ಗ್ರಾಮಗಳಿಕಗೆ‌ ಕುಡಿವ‌ ನೀರನ್ನು ಒದಗಿಸುತ್ತಿತ್ತು. ಅಲ್ಲದೆ ವ್ಯವಸಾಯ, ದೇವಾಲಯಗಳ ಪೂಜೆ‌-ಪುನಸ್ಕಾರಕ್ಕೂ ಇದೇ ನೀರನ್ನು ಬಳಸಲಾಗುತ್ತಿತ್ತು. ಆದರೆ, ಬೆಂಗಳೂರೆಂಬ ಬೃಹತ್​ ನಗರದ ತ್ಯಾಜ್ಯ ಹಾಗೂ ಕಲುಷಿತ ನೀರು ಹರಿದು ಬರುತ್ತಿರುವ ಪರಿಣಾಮ ಬಿಡದಿ ಸುತ್ತಮುತ್ತಲ ಗ್ರಾಮಸ್ಥರ ಗೋಳು ಇದೀಗ ಹೇಳ‌ತೀರದಾಗಿದೆ. ಈ ಬಗ್ಗೆ ನೋವು ತೋಡಿಕೊಂಡರು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಹರಿದು ಬರುತ್ತಿರುವ ಕಲುಷಿತ ನೀರು

ಈ ನೀರನ್ನು ಬಳಸುತ್ತಿರುವವರಿಗೆ ಚರ್ಮರೋಗ ಕಂಡು ಬರುತ್ತಿದೆ. ತುರಿಕೆ‌, ಇಸುಬು, ಕಜ್ಜಿ, ಅಲರ್ಜಿ ಹೆಚ್ಚಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಏನು ಪ್ರಯೋಜನವಾಗಿಲ್ಲ ಅಂತಾ ಮನದಾಳದ ನೋವು ತೋಡಿಕೊಳ್ಳುತ್ತಿದ್ದಾರೆ.

ಬೈರಮಂಗಲ ಕೆರೆ ಶುದ್ಧವಾಗಿತ್ತು. ಅದಕ್ಕೆ ವೃಷಭಾವತಿ ನದಿ ನೀರು‌ ಕೂಡ ಸೇರುತ್ತದೆ. ಆದರೆ, ಕಲುಷಿತ‌ ನೀರಿನಿಂದ ವೃಷಭಾವತಿ ಮೂಲಕ‌ ಬೈರಮಂಗಲಕೆರೆ ತುಂಬಿದ್ದರಿಂದ ಕೆಟ್ಟು ದುರ್ವಾಸನೆ‌ ಬರುತ್ತಿದೆ.‌ ಅಲ್ಲದೆ, ಬಿಳಿ‌ನೋರೆ ಸಾಗರೋಪಾದಿಯಲ್ಲಿ ಕಾಣಿಸಿಕೊಂಡಿದ್ದು ಅದನ್ನ ನೋಡಲು ಬರುವವರಿಗೂ ಅಲರ್ಜಿ ಕಾಡುತ್ತಿದೆ. ಇಲ್ಲಿನ ಬಹುಪಾಲು ರೈತರ ಆರೋಗ್ಯ ಹದಗೆಡುತ್ತಿದೆ. ಅಲ್ಲದೆ, ವಿಪರೀತ ಸೊಳ್ಳೆ ಹೆಚ್ಚಾಗಿದ್ದು ಇದು ಮಾರಣಾಂತಿಕ ಕೆರೆಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು‌ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ.

Intro:Body:Kn_rmn_02_lake_water_problems_7204219Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.