ETV Bharat / state

ಕನನಕಪುರದಲ್ಲಿ ವಿಷ ಕುಡಿದು ಸಾವಿಗೆ ಶರಣಾದ ಡಿಕೆಶಿ ಅಭಿಮಾನಿ - ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮ

ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಮಾಜಿ ಸಚಿವ, ಕಾಂಗ್ರೆಸ್​ ಮುಖಂಡ ಡಿ.ಕೆ. ಶಿವಕುಮಾರ್ ಅಭಿಮಾನಿ ಎಂದು ತಿಳಿದು ಬಂದಿದೆ.

ಕನನಕಪುರದಲ್ಲಿ ವಿಷ ಕುಡಿದು ಸಾವಿಗೆ ಶರಣಾದ ಡಿಕೆಶಿ ಅಭಿಮಾನಿ
author img

By

Published : Oct 11, 2019, 5:21 AM IST

ರಾಮನಗರ: ಕಾಂಗ್ರೆಸ್​ನ‌ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ಜೈಲು ಸೇರಿದ್ದರಿಂದ ಬೇಸತ್ತು ಅವರ ಅಭಿಮಾನಿಯೊಬ್ಬ ಮದ್ಯಕ್ಕೆ ವಿಷ ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ನಿವಾಸಿ ಮಹದೇವ (43) ಎಂಬಾತನೇ ಸಾವಿಗೆ ಶರಣಾದ ವ್ಯಕ್ತಿ. ಡಿ.ಕೆ. ಶಿವಕುಮಾರ್ ಜೈಲು ಸೇರಿದ ದಿನದಿಂದಲೂ ಈತ ತೀವ್ರವಾಗಿ ತಲೆಕೆಡಿಸಿಕೊಂಡು ಕುಡಿತದ ದಾಸನಾಗಿ ಕೊನೆಗೆ ವಿಷ ಸೇವನೆ ಮಾಡಿ‌ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಡಿಕೆಶಿಯನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದ ದಿನದಿಂದಲೂ ಈತ, "ನಾನು ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರನ್ನು ಬಿಡುಗಡೆ‌ ಮಾಡಿಸುತ್ತೇನೆ ಅವರು ಬಂದೇ ಬರ್ತಾರೆ ನಾನು ಕರ್ಕೊಂಡು ಬರ್ತೀನಿ" ಎಂದು ಕೂಗಾಡುತ್ತಲೇ ಇದ್ದ. ವಿಷ ಕುಡಿದ ಮತ್ತಿನಲ್ಲಿಯೂ ಡಿಕೆಶಿ ಬಿಡುಗಡೆಯಾಗಿಯೇ ಆಗುತ್ತಾರೆ ಎಂದು ಮಹದೇವ ಹೇಳುತ್ತಿದ್ದ, ಆತನ‌ ಸ್ಥಿತಿ‌ ಕಂಡು ರಾತ್ರಿಯೇ ಕ್ಲಿನಿಕ್​ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಹೋಗುವಷ್ಟರಲ್ಲಿ ಮಹದೇವ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು ಎಂದು ತಿಳಿದು ಬಂದಿದೆ.

Intro:Body:ರಾಮನಗರ: ಕಾಂಗ್ರೆಸ್ ನ‌ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಯೊಬ್ಬ ಮದ್ಯಕ್ಕೆ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ‌ಹರಡಿದೆ. ತನ್ನ‌ನೆಚ್ಚಿನ‌ನಾಯಕ ಜೈಲು ಸೇರಿದ ದಿನದಿಂದಲೇ ತಲೆ ಕೆಡಿಸಿಕೊಂಡು ಕುಡಿತದ ದಾಸನಾಗಿ ಕೊನೆಗೆ ವಿಷ ಸೇವನೆ ಮಾಡಿ‌ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ನಿವಾಸಿ ಮಹದೇವ (43) ಎಂಬಾತನೇ ಮೃತಪಟ್ಟ ದುರ್ದೈವಿ ಎನ್ನಲಾಗಿದೆ.
ಡಿಕೆಶಿ ಯನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದ ದಿನದಿಂದಲೂ ನಾನು ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರನ್ನು ಬಿಡುಗಡೆ‌ ಮಾಡಿಸುತ್ತೇನೆ ಅವರು ಬಂದೇ ಬರ್ತಾರೆ ನಾನು ಕರ್ಕೊಂಡು ಬರ್ತೀನಿ ಎಂದು ಕೂಗಾಡುತ್ತಲೇ ಇದ್ದ ಮಧ್ಯವ್ಯಸನಿಯಾಗಿದ್ದ, ಅತಿಯಾಗಿ ಕುಡಿದು ಕೂಗಾಡ್ತಿದ್ದ,ಕಳೆದ ರಾತ್ರಿ ಕಂಠಪೂರ್ತಿ ಕುಡಿದು, ನಿಶೆಯಲ್ಲಿ ಜತೆಗೆ ವಿಷ ಸೇವಿಸಿದ್ದಾನೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿಯೂ ಡಿಕೆಶಿ ಬಿಡುಗಡೆಯಾಗಿಯೇ ಆಗುತ್ತಾರೆ ಎಂದು ಮಹದೇವ ಹೇಳುತ್ತಿದ್ದ ಆತನ‌ ಸ್ಥಿತಿ‌ ಕಂಡು ರಾತ್ರಿಯೇ ಕನಕ ಕ್ಲಿನಿಕ್ ಗೆ ಹೋಗುವಷ್ಟರಲ್ಲಿ ಡಿಕೆಶಿ ಅಭಿಮಾನಿ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು ಎಂದು ತಿಳಿದುಬಂದಿದೆ.
ಇನ್ನು, ರಾಮನಗರ ಜಿಲ್ಲೆಯ ಕನಕಪುರದಲ್ಲಿ ಪ್ರಕರಣ ದಾಖಲಾಗಬೇಕಿದೆಯಾದರೂ ಈವರೆಗೆ ಅಂತಹ ಪ್ರಯತ್ನ‌ ನಡೆದಿಲ್ಲ ಎನ್ನಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.