ರಾಮನಗರ: ಫಲಿತಾಂಶ ಬರುವ ಮುನ್ನವೇ ನಗರಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲೀಲಾ ಗೋವಿಂದರಾಜ್ (42) ಎಂಬುವರು ಮಹಾಮಾರಿ ಕೋವಿಡ್ಗೆ ಬಲಿಯಾಗಿದ್ದಾರೆ.
ನಗರಸಭೆಯ 4ನೇ ವಾರ್ಡ್ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೀಲಾ ಗೋವಿಂದರಾಜು ಅವರಲ್ಲಿ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ನಾಳೆ (30) ರಾಮನಗರ ನಗರಸಭೆಯ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯಲಿದೆ. ಆದರೆ, ಫಲಿತಾಂಶ ಬರುವ ಒಂದು ದಿನ ಮುನ್ನವೇ ಲೀಲಾ ಅವರ ಸಾವು ಸಂಭವಿಸಿದ್ದು ಮೃತರ ಕುಟುಂಬದವರು ಸೇರಿದಂತೆ ಬೆಂಬಲಿಗರು ದುಃಖ ವ್ಯಕ್ತಪಡಿಸಿದ್ದಾರೆ. 27 ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು.