ರಾಮನಗರ: ನೂತನ ದಶಪಥ ಎಕ್ಸ್‌ಪ್ರೆಸ್ ವೇ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯ ಅಭಿಷೇಕ್ (29) ಮತ್ತು ಸಂತೋಷ್ (23) ಬಂಧಿತರು. ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಸಿಕ್ಕೆಪಾಳ್ಯ ನಿವಾಸಿ ಪವನ್ (30) ಎಂಬಾತನನ್ನು ಹೆಜ್ಜಾಲ ಸಮೀಪ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಗಲಾಟೆ ವಿಕೋಪಕ್ಕೆ ತಿರುಗಿ ಹತ್ಯೆ : ಆರೋಪಿಗಳು ಜೂನ್ 5 ರಂದು ಸ್ನೇಹಿತರೊಂದಿಗೆ ಕಾರಿನಲ್ಲಿ ರಾತ್ರಿ ಮೈಸೂರು ಕಡೆಗೆ ತೆರಳುತ್ತಿದ್ದರು. ಟೋಲ್ ಶುಲ್ಕ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ಪವನ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆ ಬಳಿಕ ಪವನ್ ಮನೆಗೆ ಹೋಗುವಾಗ ಬೈಕ್‌ನಲ್ಲಿ ಬಂದು ಆರೋಪಿಗಳು ಮತ್ತೆ ಗಲಾಟೆ ಶುರು ಮಾಡಿದ್ದರು. ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಆರೋಪಿಗಳು ಪವನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯೋಗಾಭ್ಯಾಸ ಮಾಡುತ್ತಿದ್ದಾಗ ಟ್ರಕ್ ಡಿಕ್ಕಿ, ಮೂವರ ದುರ್ಮರಣ: ಸಮೀಪದ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೆಳಗಿನ ಹೊತ್ತು ಯೋಗಾಭ್ಯಾಸದಲ್ಲಿ ತೊಡಗಿದ್ದ ಬಾಲಕರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿದ ಪರಿಣಾಮ ಮೂವರು ಬಾಲಕರು ಸ್ಥಳದಲ್ಲೇ ಸಾವಿಗೀಡಾದರೆ, ಮತ್ತೆ ಮೂವರು ತೀವ್ರವಾಗಿ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಮಡೋರಾ ಖುರ್ದ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿತು.
ಟ್ರಕ್ ಗುದ್ದಿದ ರಭಸಕ್ಕೆ ಅಭಿರಾಜ್ (12) ಮತ್ತು ಅಭಿನವ್ (14) ಸ್ಥಳದಲ್ಲೇ ಮೃತಪಟ್ಟರೆ, 21 ವರ್ಷದ ಅನುಜ್ ಅಲಿಯಾಸ್ ಭೋಲು ಎಂಬ ಯುವಕ ಝಾನ್ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ 9 ವರ್ಷದ ಲಕ್ಷ್ಯ, 17 ವರ್ಷದ ಸುಂದರಂ ಹಾಗೂ 14 ವರ್ಷದ ಆರ್ಯನ್ ಎಂಬ ಬಾಲಕರು ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾನ್ಪುರ ಕಡೆಯಿಂದ ಅತಿ ವೇಗದಲ್ಲಿ ಬಂದ ಟ್ರಕ್ ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆ. ಟ್ರಕ್ ನುಗ್ಗಿದಾಗ ಬಾಲಕರು ರಸ್ತೆಯಲ್ಲಿ ಕುಳಿತು ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ಆರೇಳು ಜನರಿಗೆ ಟ್ರಕ್ ಗುದ್ದಿಕೊಂಡು ಹೋಗಿದೆ. ಭೀಕರ ಅಪಘಾತವು ಬಾಲಕರ ಸಾವು -ನೋವಿಗೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿ ಅಭಿಷೇಕ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಗರ್ಭಿಣಿಯೆಂದು ತಿಳಿದು ಆರೋಪಿ ಎಸ್ಕೇಪ್