ರಾಮನಗರ: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರದಲ್ಲಿ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದೆ. ಕಾಲಿಗೆ ಸರಪಳಿ ಕಟ್ಟಿ ಕಾರ್ಮಿಕನಿಂದ ಕೆಲಸ ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯುವಕನೊಬ್ಬನನ್ನು ರಕ್ಷಿಸಿರುವ ಘಟನೆ ನಡೆದಿದೆ.
ಮುಂಗಡವಾಗಿ ಸಾಲ ಪಡೆದಿದ್ದ ಕೂಲಿ ಕಾರ್ಮಿಕ ವಾಸೀಂ, ಸರಿಯಾಗಿ ಕೆಲಸ ಬರುತ್ತಿಲ್ಲ ಎಂದು 9 ದಿನಗಳಿಂದ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಮೆಹಬೂಬ್ ನಗರದಲ್ಲಿರುವ ಎಸ್‌ಐಯು ಸಿಲ್ಕ್ ಕಾರ್ಖಾನೆಯಲ್ಲಿ ಘಟನೆ ನಡೆದಿದ್ದು, ಮಾಲೀಕ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಕಾರ್ಮಿಕ ಮೊಹಮ್ಮದ್ ವಸೀಂ (24) ನನ್ನು ಪೊಲೀಸರು ರಕ್ಷಿಸಿದ್ದಾರೆ. ಕಾರ್ಖಾನೆಯ ಮಾಲೀಕ ಮತ್ತು ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಐಜೂರಿನ ವಾಟರ್ ಟ್ಯಾಂಕ್ ವೃತ್ತದ ನಿವಾಸಿಯಾದ ವಸೀಂ, ಐದು ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸಕ್ಕೆ ಸೇರುವಾಗ ಮುಂಗಡವಾಗಿ ₹1.50 ಲಕ್ಷ ಸಾಲ ಪಡೆದಿದ್ದನು. ಅನಿವಾರ್ಯ ಕಾರಣಗಳಿಂದಾಗಿ ವಾಸೀಂ ಒಂದು ತಿಂಗಳು ಕೆಲಸಕ್ಕೆ ಹೋಗದ ಹಿನ್ನೆಲೆಯಲ್ಲಿ ನಾವು ಕೊಟ್ಟ ಸಾಲ ತೀರುವವರೆಗೆ ಫ್ಯಾಕ್ಟರಿಯಲ್ಲೇ ಇರಬೇಕು ಎಂದು ಕಾಲಿಗೆ ಸರಪಳಿ ಕಟ್ಟಿ ಮಾಲೀಕರು ಕೆಲಸ ಮಾಡಿಸುತ್ತಿದ್ದರು ಆರೋಪಿಸಲಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾರ್ಮಿಕ ಮಕ್ಕಳ ವಿದ್ಯಾರ್ಥಿ ಸಹಾಯಧನ ಕಡಿತದ ವಿರುದ್ಧ ಎಬಿವಿಪಿ ಪ್ರತಿಭಟನೆ