ರಾಮನಗರ: ಬಂಡೆಮಠ ಬಸವಲಿಂಗ ಸ್ವಾಮೀಜಿ ಡೆತ್ ನೋಟ್ನಲ್ಲಿ ಅನಾಮಧೇಯ ವ್ಯಕ್ತಿ ಹೆಸರು ಉಲ್ಲೇಖಿಸಿದ್ದಾರೆ. ಆದರೆ ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ಬಗ್ಗೆ ಅವರು ಉಲ್ಲೇಖಿಸಿರುವ ಮಾತುಗಳಿಂದ ಬೇಜಾರಾಗಿದೆ ಅಂತ ಸ್ವಾಮೀಜಿ ಬರೆದಿದ್ದಾರೆಂದು ರಾಮನಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ ವ್ಯತ್ಯಾಸ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿದ ಎಸ್ಪಿ ಸಂತೋಷ್ ಬಾಬು ಅವರು, ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಮೂರು ಪುಟಗಳ ಡೆತ್ ನೋಟ್ ಸಿಕ್ಕಿರುವುದು ನಿಜ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡೆತ್ ನೋಟ್ ಮತ್ತು ಪೊಲೀಸರಿಗೆ ಸಿಕ್ಕಿರುವ ಡೆತ್ ನೋಟ್ ನಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿಯಲ್ಲಿ ತನಿಖೆ: ಡೆತ್ ನೋಟ್ನಲ್ಲಿ ಕೆಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಸ್ವಾಮೀಜಿಗಳ ಸಾವಿನಲ್ಲಿ ಅವರ ಪಾತ್ರವೇನೂ ಇಲ್ಲ. ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ಬಗ್ಗೆ ಅವರು ಉಲ್ಲೇಖಿಸಿ ಅವನಾಡಿರುವ ಮಾತುಗಳಿಂದ ಬೇಜಾರಾಗಿದೆ ಅಂಥ ಬರೆದಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ ಕಂಚುಗಲ್ ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ: ಕುದೂರು ಠಾಣೆಯಲ್ಲಿ ದೂರು