ರಾಮನಗರ: ಮಾಗಡಿ ತಾಲೂಕಿನ ಕಂಚಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಮಠದಲ್ಲಿ ಕೆಲಸ ಮಾಡುತ್ತಿದ್ದ ಅಡ್ವೊಕೇಟ್ ಮಹದೇವಯ್ಯ ಹಾಗೂ ದೊಡ್ಡಬಳ್ಳಾಪುರ ಮೂಲದ 21 ವರ್ಷದ ಯುವತಿಯನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
3 ಡೆತ್‌ನೋಟ್ ಪತ್ತೆ, 20ಕ್ಕೂ ಹೆಚ್ಚು ಜನರ ವಿಚಾರಣೆ: ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಮೂರು ಪುಟದ ಡೆತ್‍ನೋಟ್ ಬರೆದು, ಅದರಲ್ಲಿ ಆತ್ಮಹತ್ಯೆಗೆ ಕಾರಣ ಬಹಿರಂಗ ಪಡಿಸಿದ್ದರು. ಅದರಲ್ಲಿ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಉಲ್ಲೇಖಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ರಾಮನಗರ ಎಸ್‌ಪಿ ಸಂತೋಷ್ ಬಾಬು, ಕಣ್ಣೂರು ಶ್ರೀ ಹಾಗೂ ಬಂಡೆಮಠದ ಶ್ರೀಗಳ ನಡುವೆ ಮಠದ ವಿಚಾರಕ್ಕೆ ಮನಸ್ತಾಪ ಏರ್ಪಟ್ಟಿತ್ತು. ಅಂತೆಯೇ ಕಣ್ಣೂರು ಸ್ವಾಮೀಜಿ, ಯುವತಿ ಹಾಗೂ ಇತರರು ಸಂಚು ರೂಪಿಸಿ ವಿಡಿಯೋ ಮಾಡಿಕೊಂಡಿದ್ದರು. ಆದರೆ ಯಾವ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನುವುದು ತನಿಖೆ ನಂತರ ತಿಳಿದುಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಡೆತ್ನೋಟ್ನಲ್ಲಿ ಬಂಡೆಮಠ ಸ್ವಾಮೀಜಿ ಉಲ್ಲೇಖಿಸಿದ್ದ ಆರೋಪಿ ಮಹಿಳೆಯನ್ನು ರಾಮನಗರ ಪೊಲೀಸರು ಮೊದಲು ವಿಚಾರಣೆಗೆ ಒಳಪಡಿಸಿದಾಗ ಈ ಎಲ್ಲ ಮಾಹಿತಿ ಹೊರಬಿದ್ದಿದೆ ಎಂದು ತಿಳಿದುಬಂದಿದೆ.
(ಓದಿ: ಮರ್ಯಾದೆಗೆ ಅಂಜಿ ಸ್ವಾಮೀಜಿ ಆತ್ಮಹತ್ಯೆ?.. ಡೆತ್ನೋಟ್ನಲ್ಲಿರುವುದು ಏನು? )