ರಾಮನಗರ : ಕೈದಿ ಹಾಗೂ ಜೈಲು ಸಿಬ್ಬಂದಿ ನಡುವೆ ಗಲಾಟೆಯಾಗಿ ಎಲ್ಲಾ ಕೈದಿಗಳು ಉಪವಾಸ ನಡೆಸಿರುವ ಘಟನೆ ರಾಮನಗರದ ಕಾರಾಗೃಹದಲ್ಲಿ ನಡೆದಿದೆ. 196 ಮಂದಿ ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆಂಬ ಮಾಹಿತಿ ಸಿಕ್ಕಿದ್ದು, ಸಿಬ್ಬಂದಿ ಹಾಗೂ ಒಬ್ಬ ಕೈದಿ ನಡುವೆ ಶುರುವಾದ ಗಲಾಟೆಯಿಂದ ಕೈದಿಗಳೆಲ್ಲರೂ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಜೈಲು ಸಿಬ್ಬಂದಿಯೊಬ್ಬರು ಕೈದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ ಎಲ್ಲಾ ಕೈದಿಗಳು ಉಪವಾಸ ಮಾಡುವ ಮುಖಾಂತರ ಪ್ರತಿಭಟನೆ ನಡೆಸಿದ್ದಾರೆ. ಕೈದಿಗಳ ಪ್ರತಿಭಟನೆ ವಿಚಾರವನ್ನ ಜಡ್ಜ್‌ಗೆ ಪ್ರಭಾರ ಜೈಲರ್ ಮಹೇಶ್ ವಿಷಯ ಮುಟ್ಟಿಸಿದ್ದಾರೆ. ಕಾರಾಗೃಹಕ್ಕೆ ನ್ಯಾಯಾಧೀಶರು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಓದಿ: ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ