ETV Bharat / state

ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ - marijuana case

ಈತ ತನ್ನ ಮನೆಯ ಹಿತ್ತಲಿನ ಶೌಚಾಲಯದ ಪಕ್ಕದಲ್ಲಿ ಹೂ ಗಿಡಗಳು, ಹೀರೇಕಾಯಿ ಮತ್ತು ಸೌತೆಕಾಯಿ ಬಳ್ಳಿಗಳ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದು ರೇಷ್ಮೆ ಚಂದ್ರಿಕೆಗಳಿಂದ ಮುಚ್ಚಿಟ್ಟು ಯಾರಿಗೂ ಕಾಣದಂತೆ ಗಾಂಜಾ ಬೆಳೆದಿದ್ದ.

a person arrested who grew marijuana in between flower plants
ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ
author img

By

Published : Sep 9, 2020, 7:21 PM IST

ರಾಮನಗರ: ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಓರ್ವ‌ನನ್ನು ಬಂಧಿಸಿರುವ ಘಟನೆ ಬೆಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬೆಟ್ಟೇಗೌಡನದೊಡ್ಡಿ ಗ್ರಾಮದ ಅಲಗೇಗೌಡ ಅಲಿಯಾಸ್​ ಮೂಗೇಗೌಡ ಎಂಬಾತ ಅಕ್ರಮವಾಗಿ ಗಾಂಜಾ ಬೆಳೆದು‌ ಇದೀಗ ಪೋಲೀಸರ ಅಥಿತಿಯಾಗಿದ್ದಾನೆ.

ಈತ ತನ್ನ ಮನೆಯ ಹಿತ್ತಲಿನ ಶೌಚಾಲಯದ ಪಕ್ಕದಲ್ಲಿ ಹೂ ಗಿಡಗಳು, ಹೀರೇಕಾಯಿ ಮತ್ತು ಸೌತೆಕಾಯಿ ಬಳ್ಳಿಗಳ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದು ರೇಷ್ಮೆ ಚಂದ್ರಿಕೆಗಳಿಂದ ಮುಚ್ಚಿಟ್ಟು ಯಾರಿಗೂ ಕಾಣದಂತೆ ಗಾಂಜಾ ಬೆಳೆದಿದ್ದ.

ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಕೋಡಿಹಳ್ಳಿ ಪೊಲೀಸರು ಅರೋಪಿ ಮೂಗೇಗೌಡನನ್ನು ಬಂಧಿಸಿ ಅಕ್ರಮವಾಗಿ ಬೆಳೆದಿದ್ದ 7 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು 10 ಕೆ.ಜಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು, ಆರೋಪಿ ಮೂಗೇಗೌಡನ ವಿರುದ್ಧ ಕಲಂ-20(a) NDPS ACT 1985 ಅಡಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.