ETV Bharat / state

10 ವರ್ಷದಿಂದ ಬಾಡಿಗೆ ನೀಡದ ವ್ಯಾಪಾರಸ್ಥರು: ವಾಣಿಜ್ಯ ಸಂಕೀರ್ಣ ಜಪ್ತಿ - ramanagara

ತಾಲೂಕು ಪಂಚಾಯ್ತಿಗೆ ಸೇರಿದ ಹೆಚ್.ಡಿ. ದೇವೇಗೌಡ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ ಎಂದು ಮಳಿಗೆಗಳಿಗೆ ಬೀಗ ಜಡಿಯಲು ಪಂಚಾಯ್ತಿ ಅಧಿಕಾರಿ‌ಗಳು ಮತ್ತು ಆಡಳಿತ ಮಂಡಳಿಯವರು ಮುಂದಾದ ಘಟನೆ ರಾಮನಗರದಲ್ಲಿ ನಡೆದಿದೆ.

ವಾಣಿಜ್ಯ ಸಂಕೀರ್ಣ ಜಪ್ತಿ ಮಾಡಿದ ತಾಲೂಕು ಪಂಚಾಯಿತಿ ಅಧಿಕಾರಿಗಳು
author img

By

Published : Aug 28, 2019, 5:41 AM IST

ರಾಮನಗರ: ತಾಲೂಕು ಪಂಚಾಯ್ತಿಗೆ ಸೇರಿದ ಹೆಚ್.ಡಿ. ದೇವೇಗೌಡ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಕಳೆದ ಹತ್ತು ವರ್ಷಗಳಿಂದ ಮಳಿಗೆಗಳ ಬಾಡಿಗೆ ಪಾವತಿಸಿಲ್ಲ ಎಂದು ಎಂದು ಬೀಗ ಜಡಿಯಲು ಪಂಚಾಯ್ತಿ ಅಧಿಕಾರಿ‌ಗಳು ಮತ್ತು ಆಡಳಿತ ಮಂಡಳಿಯವರು ಮುಂದಾದ ಘಟನೆ ರಾಮನಗರದಲ್ಲಿ ನಡೆದಿದೆ.

ವಾಣಿಜ್ಯ ಸಂಕೀರ್ಣ ಜಪ್ತಿ ಮಾಡಿದ ತಾಲೂಕು ಪಂಚಾಯಿತಿ ಅಧಿಕಾರಿಗಳು

ನಗರದ ಹೃದಯ ಭಾಗದಲ್ಲಿರುವ ಹೆಚ್​.ಡಿ. ದೇವೇಗೌಡ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳ ಬಾಡಿಗೆದಾರರಿಗೆ ಮಳಿಗೆಗಳ ಬಾಕಿ ಹಣ ಪಾವತಿಸುವಂತೆ ಬಾಗಿಲು ಮೇಲೆ ನೋಟಿಸ್ ಅಂಟಿಸಿದ್ದರೂ ತಲೆ ಕೆಡಿಸಿಕೊಳ್ಳದ ಬಾಡಿಗೆದಾರರಿಗೆ ತಾಲೂಕು ಪಂಚಾಯ್ತಿ ಅಧಿಕಾರಿಗಳು ಮಳಿಗೆಗಳಿಗೆ ಬೀಗ ಜಡಿದು ಜಪ್ತಿ ಮಾಡುವ ಮೂಲಕ ಶಾಕ್ ನೀಡಿದರು. ಈ ವೇಳೆ ಅಧಿಕಾರಿಗಳು, ತಾಲೂಕು ಪಂಚಾಯ್ತಿ ಸದಸ್ಯರ ಜೊತೆಗೆ ಬಾಡಿಗೆದಾರರ ಮಾತಿನ ಚಕಮಕಿ ನಡೆಯಿತು.

ಏನಿದು ಬಾಡಿಗೆ ರಾದ್ದಾಂತ : ಕಳೆದ 10 ವರ್ಷಗಳ ಹಿಂದೆ ತಾಲೂಕು ಪಂಚಾಯ್ತಿ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ವಾಣಿಜ್ಯ ಮಳಿಗೆಯನ್ನು ತೆರೆದು ಬಾಡಿಗೆಗೆ ನೀಡಿದೆ. ಆದರೆ ಬಾಡಿಗೆ ಪಡೆದ ಬಾಡಿಗೆದಾರರು ಇಲ್ಲಿಯ ತನಕ ಒಂದು ಪೈಸೆ ಬಾಡಿಗೆಯನ್ನು ಸಹ ತಾಲೂಕು ಪಂಚಾಯ್ತಿಗೆ ನೀಡಿಲ್ಲ. ಅಲ್ಲದೇ ನೊಟೀಸ್ ನೀಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದರಿಂದ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸದಸ್ಯರು ಬಾಡಿಗೆದಾರರಿಗೆ ಶಾಕ್ ನೀಡಿದ್ದಾರೆ. ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಜಡಿದು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ತಾ.ಪಂ. ಅಧ್ಯಕ್ಷ ನಟರಾಜ್ ಕಳೆದ 10 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಾಲೂಕು ಪಂಚಾಯತ್ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ವಾಣಿಜ್ಯ ಮಳಿಗೆಯಲ್ಲಿ 80 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದೆ. ಆದರೆ ಬಾಡಿಗೆ ಪಡೆದ ಬಾಡಿಗೆದಾರರು ಮಾತ್ರ ಬಾಡಿಗೆ ಪಡೆದ ಮಳಿಗೆಗಳನ್ನು ಬೇರೆಯವರಿಗೆ ಒಂದಕ್ಕೆ ನಾಲ್ಕು ಪಟ್ಟು ಹಣಕ್ಕೆ ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಕಾನೂನು ಬಾಹಿರವಾಗಿ ಬಾಡಿಗೆಗೆ ಪಡೆದಿರುವ ಎರಡನೇ ವ್ಯಕ್ತಿ ಮೂಲ ಬಾಡಿಗೆದಾರರಿಗೆ ಪ್ರತಿ ತಿಂಗಳು ಬಾಡಿಗೆ ನೀಡುತ್ತಲೇ ಇದ್ದಾನೆ. ಆದ್ರೆ ಮೂಲ ಬಾಡಿಗೆದಾರರು ಮಾತ್ರ ತಾಲೂಕು ಪಂಚಾಯ್ತಿಗೆ ಬಾಡಿಗೆಯನ್ನೇ ನೀಡಿಲ್ಲ. ಒಟ್ಟು 9 ಲಕ್ಷ ರೂಪಾಯಿಗಳ ಬಾಡಿಗೆ ಹಾಗೂ 18 ಲಕ್ಷ ರೂಪಾಯಿಗಳ ಮುಂಗಡ ಹಣವನ್ನು ಪಾವತಿಸಿಯೇ ಇಲ್ಲ. ಇದರಿಂದಾಗಿ ಬೀಗ ಜಡಿಯಲು‌ ಮುಂದಾಗಿರುವುದಾಗಿ ತಿಳಿಸಿದರು.

ಅಗತ್ಯ ಸೌಲಭ್ಯ ಕಲ್ಪಿಸಿ : ವಾಣಿಜ್ಯ ಮಳಿಗೆಗೆ ಮೂಲಸೌಕರ್ಯವನ್ನೇ ನೀಡಿಲ್ಲ ಮೊದಲು ಮೂಲಸೌಕರ್ಯ ಕಲ್ಪಿಸಿ ಬಳಿಕ ಬಾಡಿಗೆ ಹಣ ಕೇಳಿ ಎನ್ನುವ ಬಾಡಿಗೆದಾರರು ಅಲ್ಲಿರುವ ಸಮಸ್ಯೆಗಳ ಸಾಲುಸಾಲು ಪಟ್ಟಿ ಜೊತೆಗೆ ಪ್ರತ್ಯಕ್ಷ ವಿವರಣೆ ನೀಡುತ್ತಿದ್ದರು.

ಇಲ್ಲಿ ಮೂಲ ಬಾಡಿಗೆದಾರರು ಹಣ ಪಡೆದು ತಾಲೂಕು ಪಂಚಾಯಿತಿಗೆ ಕಟ್ಟದೇ ಇರುವುದು ತಾಲೂಕು ಪಂಚಾಯಿತಿ ಅಧಿಕಾರಿಗಳ ಈ ನಡೆಗೆ ಕಾರಣವಾಗಿದೆ.

Intro:Body:ರಾಮನಗರ : ತಾಲೂಕು ಪಂಚಾಯ್ತಿಗೆ ಸೇರಿದ ಹೆಚ್.ಡಿ. ದೇವೇಗೌಡ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಕಳೆದ ಹತ್ತು ವರ್ಷಗಳಿಂದ ಮಳಿಗೆಗಳ ಬಾಡಿಗೆ ಪಾವತಿಸಿಲ್ಲ ಎಂದು ಎಂದು ಬೀಗ ಜಡಿಯಲು ಪಂಚಾಯ್ತಿ ಅಧಿಕಾರಿ‌ಗಳು ಮತ್ತು ಆಡಳಿತ ಮಂಡಳಿಯವರು ಮುಂದಾಗಿದ್ದರು ಈ ವೇಳೆ ಬಾಡಿಗೆದಾರರು ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಲ್ಲ ಎಂದು ತಂಡದೊಂದಿಗೆ ಮಾತಿನ ಚಕಮಕಿ ನಡೆಯಿತು.
ನಗರದ ಹೃದಯ ಭಾಗದಲ್ಲಿರುವ ಹೆಚ್ಡಿ ದೇವೇಗೌಡ ವಾಣಿಜ್ಯ ಸಂಕೀರ್ಣ ದಲ್ಲಿ ಮಳಿಗೆಗಳ ಬಾಡಿಗೆದಾರರಿಗೆ ಮಳಿಗೆಗಳ ಬಾಕಿ ಹಣ ಪಾವತಿಸುವಂತೆ ಬಾಗಿಲು ಮೇಲೆ ನೋಟಿಸ್ ಅಂಟಿಸಿದ್ದರೂ ತಲೆ ಕೆಡಿಸಿಕೊಳ್ಳದ ಬಾಡಿಗೆದಾರರಿಗೆ ತಾಲೂಕು ಪಂಚಾಯ್ತಿ ಅಧಿಕಾರಿಗಳು ಮಳಿಗೆಗಳಿಗೆ ಬೀಗ ಜಡಿದು ಸೀಜ್ ಮಾಡುವ ಮೂಲಕ ಶಾಕ್ ನೀಡಿದರು. ಈ ವೇಳೆ ಅಧಿಕಾರಿಗಳು, ತಾಲೂಕು ಪಂಚಾಯ್ತಿ ಸದಸ್ಯರ ಜೊತೆಗೆ ಬಾಡಿಗೆದಾರರ ಮಾತಿನ ಚಕಮಕಿ ಜೋರಾಗಿತ್ತು .
ಏನಿದು ಬಾಡಿಗೆ ರಾದ್ದಾಂತ :
ಕಳೆದ 10 ವರ್ಷಗಳ ಹಿಂದೆ ತಾಲೂಕು ಪಂಚಾಯ್ತಿ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ವಾಣಿಜ್ಯ ಮಳಿಗೆಯನ್ನು ತೆರೆದು ಬಾಡಿಗೆಗೆ ನೀಡಿದೆ. ಆದ್ರೆ ಬಾಡಿಗೆ ಪಡೆದ ಬಾಡಿಗೆದಾರರು ಇಲ್ಲಿಯ ತನಕ ಒಂದು ನಯಾಪೈಸೆಯನ್ನೂ ಸಹ ಬಾಡಿಗೆಯನ್ನ ತಾಲೂಕು ಪಂಚಾಯ್ತಿಗೆ ನೀಡಿಲ್ಲ. ಅಲ್ಲದೇ ನೋಟೀಸ್ ನೀಡಿದ್ರೂ ಸಹ ಯಾವುದೇ ಪ್ರತಿಕ್ರಿಯೆಯನ್ನು ಸಹ ನೀಡಿಲ್ಲ. ಇದ್ರಿಂದ ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸದಸ್ಯರು ಬಾಡಿಗೆದಾರರಿಗೆ ಶಾಕ್ ನೀಡಿದ್ರು. ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಜಡಿದು ಸೀಜ್ ಮಾಡಿದ್ರು. ಇದೇ ವೇಳೆ ಮಾತನಾಡಿದ ತಾಪಂ ಅಧ್ಯಕ್ಷ ನಟರಾಜ್ ಕಳೆದ 10 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಾಲೂಕು ಪಂಚಾಯತ್ ವಾಣಿಜ್ಯ ಮಳಿಗೆಯನ್ನ ನಿರ್ಮಾಣ ಮಾಡಿದೆ. ಅಲ್ಲದೇ ವಾಣಿಜ್ಯ ಮಳಿಗೆಯಲ್ಲಿ 80 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದೆ. ಆದ್ರೆ ಬಾಡಿಗೆ ಪಡೆದ ಬಾಡಿಗೆದಾರರು ಮಾತ್ರ ಬಾಡಿಗೆ ಪಡೆದ ಮಳಿಗೆಗಳನ್ನ ಬೇರೆಯವರಿಗೆ ಒಂದಕ್ಕೆ ನಾಲ್ಕು ಪಟ್ಟು ಹಣಕ್ಕೆ ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಕಾನೂನು ಬಾಹಿರವಾಗಿ ಬಾಡಿಗೆಗೆ ಪಡೆದಿರುವ ಎರಡನೇ ವ್ಯಕ್ತಿ ಮೂಲ ಬಾಡಿಗೆದಾರರಿಗೆ ಪ್ರತಿ ತಿಂಗಳು ಬಾಡಿಗೆ ನೀಡುತ್ತಲೇ ಇದ್ದಾರೆ. ಆದ್ರೆ ಮೂಲ ಬಾಡಿಗೆದಾರರು ಮಾತ್ರ ತಾಲೂಕು ಪಂಚಾಯ್ತಿಗೆ ಬಾಡಿಗೆಯನ್ನೇ ನೀಡಿಲ್ಲ. ಒಟ್ಟು 9 ಲಕ್ಷ ರೂಪಾಯಿಗಳ ಬಾಡಿಗೆ ಹಾಗೂ 18 ಲಕ್ಷ ರೂಪಾಯಿಗಳ ಮುಂಗಡ ಹಣವನ್ನ ಪಾವತಿಸಿಯೇ ಇಲ್ಲ ಇದರಿಂದಾಗಿ ಬೀಗ ಜಡಿಯಲು‌ ಮುಂದಾಗಿರುವುದಾಗಿ ತಿಳಿಸಿದರು.
ಅಗತ್ಯ ಸೌಲಭ್ಯ ಕಲ್ಪಿಸಿ :

ವಾಣಿಜ್ಯ ಮಳಿಗೆಗೆ ಮೂಲಸೌಕರ್ಯವನ್ನೇ ನೀಡಿಲ್ಲ ಮೊದಲು ಮೂಲಸೌಕರ್ಯ ಕಲ್ಪಿಸಿ ಬಳಿಕ ಬಾಡಿಗೆ ಹಣ ಕೇಳಿ ಎನ್ನುವ ಬಾಡಿಗೆದಾರರು ಅಲ್ಲಿರುವ ಸಮಸ್ಯೆಗಳ ಸಾಲುಸಾಲು ಪಟ್ಟಿ ಜೊತೆಗೆ ಪ್ರತ್ಯಕ್ಷ ವಿವರಣೆ ನೀಡುತ್ತಿದ್ದರು. ಯಾವುದೇ ಸೆಕ್ಯೂರಿಟಿ ಇಲ್ಲದೆ ಕುಡುಕರ ತಾಣವಾಗಿದೆ ಶೌಚಾ ಕೂಡ ಇಲ್ಲಿಯೇ ಮಾಡಿದ್ದಾರೆ ತಡೆಯೋಕೆ ಸಾಧ್ಯವಾಗಿಲ್ಲ ಹೇಳಿದ್ರೆ ಯಾವೊಬ್ಬ ಅಧಿಕಾರಿ ಅಥವಾ ತಾಲ್ಲೂಕು ಪಂಚಾಯ್ತಿ ಆಡಳಿತ ಮಂಡಳಿ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಮೂಲ‌ ಬಾಡಿಗೇದಾರರಲ್ಲಿ ಶಿವಲಿಂಗೇಗೌಡ , ಕಿರಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಅದೇನೆ ಆದ್ರೂ ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅನ್ನೋ ರೀತಿ ತಾಲೂಕು ಪಂಚಾಯ್ತಿಯ ಪರಿಸ್ಥಿತಿಯಾಗಿದೆ. ಮಳಿಗೆಗಳನ್ನು ಬಾಡಿಗೆಗೆ ಪಡೆದ ಮೂಲ ಬಾಡಿಗೆದಾರರು ಪ್ರತಿ ತಿಂಗಳು ಬಾಡಿಗೆ ಹಣ ಏಣಿಸ್ಕೊತಿದ್ದಾರೆ. ಆದ್ರೆ ತಾಲೂಕು ಪಂಚಾಯ್ತಿಗೆ ಮಾತ್ರ ನಯಾ ಪೈಸೆಯನ್ನೂ ನೀಡ್ತಿಲ್ಲ, ಹೀಗೆ ಸರ್ಕಾರದ ಆದಾಯ ಹೇಳೋರು ಕೇಳೊರು ಇಲ್ಲದಂತೆ ಸೋರಿಕೆಯಾಗ್ತಿದೆ. ಇದೀಗ ಎಚ್ಚೆತ್ತುಕೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಪಟ್ಟು ಸಡಿಲಿಸದೆ ಮುಂದುವರಿದರೆ ಸರ್ಕಾರದ‌ಬೊಕ್ಕಸಕ್ಕಾಗುತ್ತಿರುವ ನಷ್ಠ ತಪ್ಪುತ್ತದೆ ಎನ್ನೋದು ಸಾರ್ವಜನಿಕರ ಮಾತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.