ರಾಮನಗರ : ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಈಶ್ವರ್ (55) ಎಂಬ ವ್ಯಕ್ತಿಯು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ.
ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್ ಕಳೆದ ವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಶ್ವರ್ ಅವರ ಸಹೋದರ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓದಿ: 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಸೇವೆಗೆ ಬೇಡ ಎಂದ ಎಸ್ಬಿಐಗೆ ಮಹಿಳಾ ಆಯೋಗ ನೋಟಿಸ್..
ಈಶ್ವರ್ ಡೆತ್ ನೋಟ್‍ನಲ್ಲಿ ಹೆಂಡತಿ, ಸಂಬಂಧಿಕರು, ಸ್ನೇಹಿತರು, ಜಯನಗರ ಎಸಿಪಿ ಸೇರಿದಂತೆ ಒಟ್ಟು 12 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ನನ್ನ ಸಾವಿಗೆ ಹೆಂಡತಿಯೇ ಪ್ರಮುಖ ಕಾರಣ. ನನ್ನ ಸಂಬಂಧಿಕರು ಸರಿ ಇರಲಿಲ್ಲ. ಈ ಹಿಂದೆ ನನ್ನ ಪತ್ನಿಯೇ ನನ್ನ ವಿರುದ್ಧ ದೂರು ದಾಖಲಿಸಿದ್ದ ಸಮಯದಲ್ಲಿ ಎಸಿಪಿ ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡದೇ ನನ್ನನ್ನು ಠಾಣೆಗೆ ಕರೆಸಿದ್ದರು ಎಂದು ಅವರು ದೂರಿದ್ದರು.
ಡೆಟ್‌ನೋಟ್ ಆಧರಿಸಿ ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆದಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ