ರಾಮನಗರ: ಕನಕಪುರ ತಾಲೂಕಿನ ಸೋಲಿಗೆರಿ ಗ್ರಾಮದಲ್ಲಿ ಜಿಂಕೆಯನ್ನು ಹನ್ನೊಂದು ಅಡಿ ಉದ್ದದ ಹೆಬ್ಬಾವು ನುಂಗಿ ಸಂಚರಿಸಲಾಗದೆ ನರಳಾಡಿತು.
ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನವೀನ್ ಮತ್ತು ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಾಯದೊಂದಿಗೆ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಗ್ರಾಮದ ಯುವಕನೋರ್ವ ಕಾಡಿನಲ್ಲಿ ಹೋಗುತ್ತಿದ್ದ ವೇಳೆ ಹೆಬ್ಬಾವನ್ನು ಕಂಡು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್ ಸಿಗದೆ 12 ಮಂದಿ ಕೊನೆಯುಸಿರು