ರಾಮನಗರ: ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.
ರಾಮನಗರ ತಾಲೂಕಿನಲ್ಲಿ ಪಿ-7261 ಸಂಪರ್ಕದಲ್ಲಿದ್ದ 45 ವರ್ಷದ ಮಹಿಳೆ ಹಾಗೂ ಆಂಧ್ರಪ್ರದೇಶದಿಂದ ಮರಳಿದ್ದ 40 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮಾಗಡಿ ತಾಲ್ಲೂಕಿನಲ್ಲಿ ನಾಲ್ಕು ಪ್ರಕರಣ ಕಂಡುಬಂದಿವೆ. ಪಿ-7262ರ ಸಂಪರ್ಕಿತರಾದ 43 ವರ್ಷದ ಪುರುಷ, 3 ವರ್ಷದ ಹೆಣ್ಣುಮಗು, 26 ವರ್ಷದ ಮಹಿಳೆ ಹಾಗೂ 70 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಕನಕಪುರ ತಾಲ್ಲೂಕಿನಲ್ಲಿ ಪಿ-7263ರ ಸಂಪರ್ಕದಲ್ಲಿದ್ದ 29 ವರ್ಷದ ಮಹಿಳೆ, 72 ವರ್ಷದ ಮಹಿಳೆ ಹಾಗೂ 12 ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಇವರೆಲ್ಲರನ್ನೂ ಚಿಕಿತ್ಸೆಗಾಗಿ ರಾಮನಗರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.