ರಾಮನಗರ: ಜಿಲ್ಲೆಯಲ್ಲಿ ಇಂದು ಹೊಸದಾಗಿ 82 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ತಾಲೂಕುವಾರು ಕೊರೊನಾ ವಿವರ:
ಚನ್ನಪಟ್ಟಣ 39, ಕನಕಪುರ 13, ಮಾಗಡಿ 8 ಮತ್ತು ರಾಮನಗರ 22 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,187 ಕ್ಕೆ ಏರಿಕೆಯಾಗಿದೆ.
ಮೃತರ ಮಾಹಿತಿ :
ಇಂದು ಕನಕಪುರ ತಾಲೂಕಿನಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದುವರೆಗೆ ಕೊರೊನಾದಿಂದ ಒಟ್ಟು 59 ಮಂದಿ ಮೃತಪಟ್ಟಿದ್ದಾರೆ.
ಗುಣಮುಖ :
ಇಂದು ಚನ್ನಪಟ್ಟಣ ತಾಲೂಕಿನಲ್ಲಿ 32, ಕನಕಪುರ ತಾಲೂಕಿನಲ್ಲಿ 52, ಮಾಗಡಿ ತಾಲೂಕಿನಲ್ಲಿ 26 ಹಾಗೂ ರಾಮನಗರ ತಾಲೂಕಿನಲ್ಲಿ 31 ಜನ ಸೇರಿ ಒಟ್ಟಾರೆ 141 ಜನರು ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 5403 ಜನರು ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳಿಷ್ಟು :
ಇನ್ನು ಜಿಲ್ಲೆಯಲ್ಲಿ ಸುಮಾರು 725 ಜನರು ವಿವಿಧ ಕೋವಿಡ್ ಆಸ್ಪತ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಚನ್ನಪಟ್ಟಣ 155, ಕನಕಪುರ 178, ಮಾಗಡಿ 123 ಮತ್ತು ರಾಮನಗರ 269 ಪ್ರಕರಣಗಳು ಸೇರಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.