ETV Bharat / state

ಮೂರನೇ ದಿನದ ಪಾದಯಾತ್ರೆ ಮುಕ್ತಾಯ; ಹೊಸ ಉತ್ಸಾಹ ಮೂಡಿಸಿತು ಸಿದ್ದರಾಮಯ್ಯ ಪುನರಾಗಮನ

author img

By

Published : Jan 11, 2022, 10:43 PM IST

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕ್ಷೇತ್ರವಾಗಿರುವ ಕನಕಪುರದಲ್ಲಿ ಇಂದು ಪಾದಯಾತ್ರೆ ಮಾಡಿದ ಸಂದರ್ಭ ಸಾಕಷ್ಟು ಜನ ಬೆಂಬಲ ವ್ಯಕ್ತವಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬೆಳಗ್ಗೆ ಕನಕಪುರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಪಾದಯಾತ್ರೆ ವಿಚಾರವಾಗಿ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಡಿಕೆಶಿ ಜೊತೆಗೂಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

3rd-day-mekedatu-padayathra-complited-in-ramanagara
ಮೂರನೇ ದಿನದ ಪಾದಯಾತ್ರೆ

ರಾಮನಗರ: ರಾಜ್ಯ ಕಾಂಗ್ರೆಸ್ ನಾಯಕರು ಮೇಕೆದಾಟಿನಿಂದ ಆರಂಭಿಸಿರುವ ಪಾದಯಾತ್ರೆ ಮೂರನೇ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಅಪಾರ ಸಂಖ್ಯೆಯ ಬೆಂಬಲಿಗರ ಉತ್ಸಾಹದ ನಡಿಗೆ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್​ಗೆ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಸಾಥ್​ ನೀಡುವ ಮೂಲಕ ಪಾದಯಾತ್ರೆಗೆ ವಿಶೇಷ ಮೆರುಗು ತಂದರು. ಅನಾರೋಗ್ಯದ ಹಿನ್ನೆಲೆ ಮೇಕೆದಾಟು ಪಾದಯಾತ್ರೆಯ ಮೊದಲ ದಿನವೇ ಅರ್ಧಕ್ಕೆ ತಮ್ಮ ಪ್ರಯಾಣ ಮೊಟಕುಗೊಳಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸಿದ್ದರಾಮಯ್ಯ ಅವರು ಒಂದು ದಿನದ ನಂತರ ಪಾದಯಾತ್ರೆಯಲ್ಲಿ ಮರು ಸೇರ್ಪಡೆಗೊಂಡಿದ್ದಾರೆ.

ಮೂರನೇ ದಿನದ ಪಾದಯಾತ್ರೆ ಮುಕ್ತಾಯ

ತೆರಳಿದ ಕಡೆಗಳಲ್ಲೆಲ್ಲ ಕಾಂಗ್ರೆಸ್ ನಾಯಕರಿಗೆ ಜನರಿಂದ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಆದ್ರೆ ಕೋವಿಡ್ ನಿಯಮಾವಳಿಗಳ ಪಾಲನೆ ಮಾತ್ರ ಎಲ್ಲಿಯೂ ಕಂಡುಬರುತ್ತಿಲ್ಲ. ಸ್ವತಃ ರಾಜ್ಯ ಕಾಂಗ್ರೆಸ್ ನಾಯಕರು ಮಾಸ್ಕ್​ ಧರಿಸದೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕರ್ತರಂತೆ ಯಾವುದೇ ರೀತಿಯಲ್ಲೂ ಸಾಮಾಜಿಕ ಅಂತರ ಅಥವಾ ಮಾಸ್ಕ್​​ ಧರಿಸುವ ಕಾರ್ಯಕ್ಕೆ ಒತ್ತು ಕೊಟ್ಟಿಲ್ಲ. ಸೋಮವಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಡಿಕೆಶಿ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದರು. ಇಂದು ಕಾಲೇಜು ವಿದ್ಯಾರ್ಥಿಗಳು ಪಾದಯಾತ್ರೆಗೆ ಬೆಂಬಲಿಸಿ ಕಾಂಗ್ರೆಸ್ ನಾಯಕರ ಜೊತೆ ಹೆಜ್ಜೆ ಹಾಕಿದ್ದಾರೆ.

ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಮುಂದಿಟ್ಟು ಮೊದಲ ದಿನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಒಂದೊಮ್ಮೆ ನಾವು ಪಾಲ್ಗೊಂಡರೆ ನಮ್ಮ ವಿರುದ್ಧವೂ ಎಫ್ಐಆರ್ ದಾಖಲಾಗಬಹುದು ಎಂಬ ಆತಂಕಕ್ಕೆ ಸಾಕಷ್ಟು ಮಂದಿ ಆಸಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಇದ್ದರೂ ಇತ್ತ ಸುಳಿಯುತ್ತಿಲ್ಲ. ಸರ್ಕಾರದ ನಿಯಮಾವಳಿ ಕಾಂಗ್ರೆಸ್ ಪಾದಯಾತ್ರೆಗೆ ಒಂದು ರೀತಿಯಲ್ಲಿ ತಡೆ ಉಂಟು ಮಾಡುತ್ತಿದೆ.

ಚಿತ್ರರಂಗದ ಹಾಗು ವಿವಿಧ ಕ್ಷೇತ್ರದ ಗಣ್ಯರು ಹಾಗು ಮಠಾಧಿಪತಿಗಳು ಕಾರ್ಯದಲ್ಲಿ ಪಾಲ್ಗೊಂಡರು ಇದರ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿತ್ತು. ಆದರೆ, ಕಾನೂನು ತೊಡಕು ಎದುರಾಗುವ ಆತಂಕದಿಂದಾಗಿ ಯಾರೊಬ್ಬರೂ ಇತ್ತ ಮುಖ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅತ್ಯುತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕ್ಷೇತ್ರವಾಗಿರುವ ಕನಕಪುರದಲ್ಲಿ ಪಾದಯಾತ್ರೆ ಮಾಡಿದ ಸಂದರ್ಭ ಸಾಕಷ್ಟು ಜನ ಬೆಂಬಲ ವ್ಯಕ್ತವಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬೆಳಗ್ಗೆ ಕನಕಪುರದಲ್ಲಿ ಸುದ್ದಿಗೋಷ್ಟಿ ನಡೆಸಿ ಪಾದಯಾತ್ರೆ ವಿಚಾರವಾಗಿ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಡಿಕೆಶಿ ಜೊತೆಗೂಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.

ರಾತ್ರಿ 9ರವರೆಗೂ ಪಾದಯಾತ್ರೆ ನಡೆದಿದ್ದು, ಎಲ್ಲ ನಾಯಕರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ರಾಮನಗರ ಜಿಲ್ಲಾ ಎಸ್​ಪಿ ಮೂಲಕ ರಾಜ್ಯ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇಂದು ಸಹ ಅಂತಹ ಯಾವುದೇ ಸನ್ನಿವೇಶ ಗೋಚರಿಸಲಿಲ್ಲ. ನಿರಾತಂಕವಾಗಿ ಪಾದಯಾತ್ರೆ ಸಾಗಿ ಮುಕ್ತಾಯಗೊಂಡಿದ್ದು, ಜಿಲ್ಲಾಡಳಿತದ ಮೂಲಕ ಪಾದಯಾತ್ರೆಗೆ ತಡೆ ಒಡ್ಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ.

ಓದಿ: ಹೆಚ್ಚಿದ ಕೋವಿಡ್​ ಆತಂಕ.. ನಾಳೆಯಿಂದ ಮೈಸೂರು ನಗರ, ತಾಲೂಕಲ್ಲಿ ಶಾಲೆಗಳು ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.