ರಾಯಚೂರು: ನಿನ್ನೆ ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ಇರುವ ಕೃಷ್ಣ ನದಿಗೆ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿದ್ದು, ಇಂದು ಆತನ ಮೃತದೇಹ ಪತ್ತೆಯಾಗಿದೆ.
ರವಿಕುಮಾರ (20) ಮೃತ ರ್ದುದೈವಿ. ನಿನ್ನೆ ಸಂಜೆ ಸ್ನೇಹಿತರೊಡನೆ ಈಜಲು ತೆರಳಿದ್ದ ವೇಳೆ ಈಜು ಬಾರದೇ ರವಿಕುಮಾರ ನೀರಲ್ಲಿ ಮುಳುಗಿದ್ದ. ಆದರೆ, ನಿನ್ನೆ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.