ರಾಯಚೂರು: ಯುವಕನೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಮರ್ಚೇಡ್ ಗ್ರಾಮದಲ್ಲಿ ನಡೆದಿದೆ.
ತಾಯಪ್ಪ ಆಂಜನೇಯ (26) ಮೃತ ಯುವಕ. ಭಾನುವಾರ ರಾತ್ರಿ ಮರ್ಚೇಡ್ ಗ್ರಾಮದಲ್ಲಿರುವ ದೇವಾಲಯದ ಮುಂದೆ ತಾಯಪ್ಪ ಆಂಜನೇಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.
ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಕ್ವಾರಂಟೈನ್ನಲ್ಲಿದ್ದ ಅರಣ್ಯಾಧಿಕಾರಿ ಅನುಮಾನಾಸ್ಪದ ಸಾವು