ರಾಯಚೂರು: ಕೃಷ್ಣಾ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ ನಾಲ್ವರು ಯುವಕರಲ್ಲಿ ಓರ್ವ ಯುವಕ ನೀರು ಪಾಲಾಗಿದ್ದಾನೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಣೆಮಲ್ಲೇಶ್ವರ ಬಳಿಯ ಕೃಷ್ಣಾ ನದಿಯಲ್ಲಿ ನಿನ್ನೆ(ಶನಿವಾರ) ಈ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಮಲ್ಹಾರ್ ಗ್ರಾಮದ ವೀರೇಶ್ ಬಸವರೆಡ್ಡಿ(23) ಮೃತ ಯುವಕ. ಸಂಕ್ರಾಂತಿ ಹಬ್ಬದ ನಿಮಿತ್ತ ನಾಲ್ಕು ಜನ ಯುವಕರ ತಂಡ ನದಿಗೆ ಪುಣ್ಯ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ವೀರೇಶ್ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗ್ತಿದೆ.
ಮೃತ ಯುವಕ ಬಿ.ಇ.ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನಂತೆ. ಮೃತದೇಹವನ್ನು ನೀರಿನಿಂದ ತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತ್ನಿ ಕೊಲೆ ಮಾಡಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ ಕಲಬುರಗಿ ಕೋರ್ಟ್