ಲಿಂಗಸುಗೂರು : ಪರಿಸರ ನಾಶ, ಕಲುಷಿತ ವಾತಾವರಣದಿಂದ ಮುಕ್ತಿ ಹೊಂದಲು ಸಾರ್ವಜನಿಕರು ಗಿಡ-ಮರಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮನವಿ ಮಾಡಿದರು.
ಇಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಅರಣ್ಯ ಇಲಾಖೆ, ತಾಲೂಕು ಪಂಚಾಯತ್, ಪುರಸಭೆ, ಜ್ಞಾನ ಜ್ಯೋತಿ ಸಂಘ, ಪಶು ಆಸ್ಪತ್ರೆ, ಉಪಕಾರಾಗೃಹ ಸೇರಿ ವಿವಿಧೆಡೆ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆಗೆ ಮುಂದಾಗಿ ಎಂದು ತಿಳಿಸಿದರು.
ಇನ್ನೂ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಮಾತನಾಡಿ, ಸಾರ್ವಜನಿಕರು ತಮ್ಮ ಮನೆ ಬಯಲಲ್ಲಿ, ರಸ್ತೆಗಳಲ್ಲಿ, ಸಮೀಪದ ಉದ್ಯಾನಗಳಲ್ಲಿ ಸಸಿ ನೆಟ್ಟು ಸಂರಕ್ಷಣೆಗೆ ಮುಂದಾಗಬೇಕು. ಸುತ್ತ-ಮುತ್ತಲ ಪರಿಸರ ಸ್ವಚ್ಛತೆಗೂ ಆದ್ಯತೆ ನೀಡಿ ನೈಸರ್ಗಿಕ ಸಂಪತ್ತು ನಾಶ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.