ರಾಯಚೂರು : ಅನ್ಯ ಜಿಲ್ಲೆಗಳಿಂದ ಗುಳೆ ಕಾರ್ಮಿಕರು ಅಕ್ರಮ ಪ್ರವೇಶ ಪಡೆಯುವ ಪ್ರಮುಖ ಸ್ಥಳವಾಗಿ ನಗರ ಮಾರ್ಪಟ್ಟಿರುವುದು ಜಿಲ್ಲಾಡಳಿತದ ವೈಫಲ್ಯತೆಗೆ ಸಾಕ್ಷಿಯಾಗಿದೆ.
ಕೆಲ ದಿನಗಳ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ ಮೂಲದ ನೂರಾರು ಕಾರ್ಮಿಕರನ್ನು ಬೆಂಗಳೂರಿನಿಂದ ಕರೆ ತಂದು ರಸ್ತೆ ಮಧ್ಯೆ ಬಿಟ್ಟು ಹೋಗಿರುವ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೆ ವಲಸಿಗರ ಆಗಮನ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೆಂಗಳೂರಿನಿಂದ ಕರೆದುಕೊಂಡು ಬಂದ ಇವರನ್ನು ಯಾವೊಂದು ಚೆಕ್ಪೋಸ್ಟ್ನಲ್ಲಿಯೂ ತಡೆದಿಲ್ಲ. ಅಲ್ಲದೇ, ಪರ್ಯಾಯ ಮಾರ್ಗದ ಮೂಲಕ ಗಡಿ ದಾಟಿಸಿ ರಾಯಚೂರಿನ ಮುದಗಲ್ನಲ್ಲಿ ತಂದು ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.