ETV Bharat / state

ಅತ್ಯಾಚಾರ ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು: ವಿನಯ್ ಗುರೂಜಿ - ಮೈಸೂರು ಅತ್ಯಾಚಾರ ಪ್ರಕರಣ

ನಮ್ಮ ಕಾನೂನಿನಲ್ಲಿ ಒಳಗೆ ಹೋಗಲು‌ ದಾರಿ ಇದೆ. ಬಚಾವ್ ಆಗಿ ಹೊರಗೆ ಬರಲು ಕಾನೂನು ಇದೆ. ಕಳ್ಳತನ ಮಾಡುವನು ಪೊಲೀಸರಿಗಿಂತ ಬುದ್ಧಿವಂತ ಇರುತ್ತಾನೆ. ಒಳಗೆ ಹೋಗುವ ಮುನ್ನವೇ ಹೊರಗಡೆ ಬರಲು ಎಲ್ಲಾ ದಾರಿಗಳನ್ನ ಕಂಡುಕೊಡಿರುತ್ತಾನೆ ಎಂದು ವಿನಯ್ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ.

kn_rcr_01_naveen_guruji_vis_ka10035
ಅತ್ಯಾಚಾರ ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು: ವಿನಯ್ ಗುರೂಜಿ
author img

By

Published : Aug 28, 2021, 12:12 PM IST

ರಾಯಚೂರು: ಅತ್ಯಾಚಾರ ಕೃತ್ಯ ಎಸೆಗಿದವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಬಿಗಿಯಾದ ಕಾನೂನುಗಳನ್ನ ಜಾರಿಗೊಳಿಸಬೇಕೆಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿನಯ್ ಗುರೂಜಿ

ರಾಯಚೂರಿನಲ್ಲಿ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ಅವರು, ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಅಗತ್ಯವಿದೆ. ಸರ್ಕಾರ ಕಾನೂನುಗಳನ್ನು ಬಿಗಿ ಮಾಡಬೇಕಾಗಿದೆ. ಸಂದರ್ಭಗಳು ಹೀಗೆ ಬರುತ್ತೆ ಅಂತ ಯಾರಿಗೂ ಕನಸು ಬೀಳುವುದಿಲ್ಲ. ವಿದೇಶಿ ಪ್ರಭಾವ ಮತ್ತು ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತಿವೆ. ವಿದೇಶಿ ಪ್ರಭಾವಕ್ಕೆ ಯುವಕರು ಒಳಗಾಗಿದ್ದರಿಂದ ಇಂಥಾ ಕೃತ್ಯಗಳು ‌ನಡೆದಿವೆ ಎಂದಿದ್ದಾರೆ.

ನಾನು ಯಾವುದೇ ಪಕ್ಷಕ್ಕೆ ಬೈಯಲು ಇಷ್ಟ ಪಡುವುದಿಲ್ಲ. ಪ್ರಧಾನಿಮಂತ್ರಿಗೆ ಇರುವ ಜವಾಬ್ದಾರಿ ಪ್ರತಿ ಪ್ರಜೆಗೂ ಇದೆ. ಇಂಥಾ ಪ್ರಕರಣ ತಡೆಯಲು ಸರ್ಕಾರ ‌ಬಿಗಿ ಕಾನೂನು ಜಾರಿಗೆ ತರಬೇಕು. ವಿದೇಶಗಳಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಬೇಲ್ ಸಹ ಸಿಗಲ್ಲ. ವಿದೇಶದ ಮಾದರಿ ಕಾನೂನು ನಮ್ಮ ದೇಶದಲ್ಲಿಯೂ ಜಾರಿಗೆ ಬರಬೇಕು. ಆಗ ಜನರು ತಪ್ಪು ‌ಮಾಡಲು ಹೆದರುತ್ತಾರೆ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಕಾನೂನಿನಲ್ಲಿ ಒಳಗೆ ಹೋಗಲು‌ ದಾರಿ ಇದೆ. ಬಚಾವ್ ಆಗಿ ಹೊರಗೆ ಬರಲು ಕಾನೂನು ಇದೆ. ಕಳ್ಳತನ ಮಾಡುವನು ಪೊಲೀಸರಿಗಿಂತ ಬುದ್ಧಿವಂತ ಇರುತ್ತಾನೆ. ಒಳಗೆ ಹೋಗುವ ಮುನ್ನವೇ ಹೊರಗಡೆ ಬರಲು ಎಲ್ಲಾ ದಾರಿಗಳನ್ನ ಕಂಡು ಕೊಡಿರುತ್ತಾನೆ. ಅತ್ಯಾಚಾರ ಪ್ರಕರಣ ತಡೆಯಲು ಕಾನೂನುಗಳು ಬಿಗಿಯಾಗಬೇಕು ಎಂದು ವಿನಯ್ ಗುರೂಜಿ ಹೇಳಿದ್ದಾರೆ.

'ಸೋಶಿಯಲ್ ‌ಮೀಡಿಯಾ ಮಾನವ ಕುಲಕ್ಕೆ ಶಾಪ!'

ಆರೋಪಿಗಳನ್ನು ಹಿಡಿದು ಶಿಕ್ಷೆ ಕೊಡಬೇಕು. ಆಗ ಸಂತ್ರಸ್ತರಿಗೆ ಧೈರ್ಯ ಬರುತ್ತದೆ. ಶಿಕ್ಷೆ ಆಗದಿದ್ದರೆ ಇಲ್ಲಿಯೂ ತಾಲಿಬಾನ್ ವ್ಯವಸ್ಥೆ ಬಂತು ಅನ್ನಿಸುತ್ತದೆ. ಸರ್ಕಾರ ಈಗಲಾದರೂ ಸರಿಯಾದ ಕಾನೂನು ಜಾರಿಗೆ ತರಬೇಕು. ಅರಬ್ ದೇಶದಲ್ಲಿ ಕಳ್ಳತನ ಮಾಡಲು ಸಹ ಜನರು ಹೆದರುತ್ತಾರೆ. ನಾನು ಅಹಿಂಸಾವಾದಿ, ಆದರೂ ತಪ್ಪು ‌ಮಾಡಿದವರಿಗೆ ಪಾಠ ಕಲಿಸಬೇಕು. ಮನುಷ್ಯರಿಗೆ ಈಗ ಕೇಳುವ ತಾಳ್ಮೆ ಇಲ್ಲ. ನಮ್ಮ ದೇಶದ ಮೇಲೆ ವಿದೇಶಿ ಸಂಸ್ಕೃತಿ ಪ್ರಭಾವ ಇದೆ. ಸೋಶಿಯಲ್ ‌ಮೀಡಿಯಾ ಧರ್ಮವಲ್ಲ, ಮಾನವ ಕುಲಕ್ಕೆ ಶಾಪ ಆಗಿದೆ ಎಂದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಗುರೂಜಿ, ಅಫ್ಘಾನಿಸ್ತಾನ ಸಹಾಯಕ್ಕೆ ಎಲ್ಲಾ ದೇಶಗಳು ಬರಬೇಕು. ತಾಲಿಬಾನ್ ಅನ್ನು ಮಟ್ಟ ಹಾಕಬೇಕಾಗಿದೆ. ಇಲ್ಲದೆ ಹೋದರೆ ನಾವೇ ತಾಲಿಬಾನ್​ಗೆ ಪ್ಲೇ ಗ್ರೌಂಡ್ ಮಾಡಿಕೊಟ್ಟಂತೆ ಆಗುತ್ತದೆ. ಉಗ್ರವಾದವನ್ನ ಮಟ್ಟ ಹಾಕಬೇಕಾಗಿದೆ.

ಈಗ ಅಫ್ಘಾನಿಸ್ತಾನದಲ್ಲಿ ದಾಳಿ ಮಾಡಿದವರು ಮುಂದೆ ದೆಹಲಿಗೂ ಬರಬಹುದು. ಚೀನಾ ಮತ್ತು ಪಾಕಿಸ್ತಾನದವರು ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದಾರೆ. ಇದು ಹೀಗೆ ಮುಂದವರಿದರೆ ಯುದ್ಧವಾಗುವ ಅವಕಾಶ ಇರಬಹುದು. ಉಗ್ರವಾದ ತಡೆಯಲು ಎಲ್ಲರೂ ಒಮ್ಮತಕ್ಕೆ ಬರಬೇಕು. ಪಕ್ಷಗಳಲ್ಲಿ ಹೊಟ್ಟೆಕಿಚ್ಚು ಬಂದು ಪಕ್ಷಗಳು ಒಡೆದು ಹೋಗುತ್ತಿವೆ. ಸಾಮರಸ್ಯ ಇಲ್ಲದೆ ಜನರು ಕಿತ್ತಾಡುತ್ತಿದ್ದಾರೆ ಎಂದು ವಿನಯ್‌ ಗುರೂಜಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಐವರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.