ಲಿಂಗಸುಗೂರು (ರಾಯಚೂರು): ತಾಲ್ಲೂಕಿನ ಕೃಷ್ಣಾ ನದಿತೀರದ ನಡುಗಡ್ಡೆ ಗ್ರಾಮಗಳನ್ನು ಸಂಪರ್ಕಿಸಲು ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕುರಿತಾರಿ ಚುನಾಯಿತ ಪ್ರತಿನಿಧಿಗಳು ನೀಡುತ್ತಿರುವ ಸುಳ್ಳು ಭರವಸೆಗಳಿಂದ ಜನತೆ ರೋಸಿ ಹೋಗಿದ್ದಾರೆ.
ತಾಲ್ಲೂಕು ಕೇಂದ್ರ, ಗ್ರಾಮ ಪಂಚಾಯಿತಿ ಕೇಂದ್ರಸ್ಥಳಕ್ಕೆ ಅತ್ಯಂತ ಕಡಿಮೆ ದೂರದಲ್ಲಿ ಸಂಪರ್ಕಿಸುವ ಮತ್ತು ಅಗತ್ಯ ವಸ್ತುಗಳು, ಕೃಷಿ ಸಾಮಗ್ರಿ ಸಾಗಣೆ ಸೇರಿದಂತೆ ದೈನಂದಿನ ವ್ಯಾವಹಾರಿಕ ಬದುಕಿಗೆ ಅನುಕೂಲ ಕಲ್ಪಿಸಲು ಗೋನವಾಟ್ಲ ಕಡದರಗಡ್ಡಿ ಮಧ್ಯದ ಕೃಷ್ಣಾ ನದಿಗೆ ಸೇತುವೆ ನಿರ್ಮಿಸುವಂತೆ ವರ್ಷಗಳಿಂದ ಹೋರಾಟ ನಡೆಯುತ್ತಿದೆ.
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತದಾನವನ್ನು ಇಲ್ಲಿನ ಜನರು ಬಹಿಷ್ಕಾರಿಸಿದ್ದರು. ಇದ ಪರಿಣಾಮ ಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ದಶಕಗಳ ಹೋರಾಟಗಳ ಬಳಕ ಸೇತುವೆ ಕಾಮಗಾರಿಗೆ 4 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿತ್ತು.
ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಾಗ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಹಾರ ಕಾರ್ಯ ನಡೆಸುತ್ತದೆ. ಆದ್ರೆ ಈ ನಿಟ್ಟಿನಲ್ಲಿ ಯಾವೊಂದು ರೀತಿಯ ಶಾಶ್ಬತ ಪರಿಹಾರ ಕಾರ್ಯವೂ ಇಲ್ಲಿ ಮಾಡಿಲ್ಲ. ತಮ್ಮ ಭರವಸೆಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಪಿಡಬ್ಲ್ಯೂಡಿ ಎಇಇ ಜಗದೇವ ಮೂರ್ತಿ ಈ ಬಗ್ಗೆ ಮಾತನಾಡಿ, ನದಿಗೆ ಅಡ್ಡಲಾಗಿ ಗೋನವಾಟ್ಲ- ಕಡದರಗಡ್ಡಿ ಮಧ್ಯೆ ಸೇತುವೆ ನಿರ್ಮಾಣ ಮಾಡುವಂತ ಯಾವ ಯೋಜನೆಗೂ ಇಲಾಖೆ ಮುಂದಾಗಿಲ್ಲ. ಈ ಮೊದಲು 4 ಕೋಟಿ ರೂ ಅನುದಾನ ಬಂದಿದ್ದು ಅದನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿಕೊಂಡಿರುವ ಮಾಹಿತಿ ಮಾತ್ರ ನಮ್ಮಲ್ಲಿದೆ ಎಂದು ತಿಳಿಸಿದರು.