ETV Bharat / state

ಮನವಿಗೆ ಸ್ಪಂದಿಸದ ಅಧಿಕಾರಿಗಳು : ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು - Raichur

ಮನವಿಗೆ ಸ್ಪಂದಿಸಿದ ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮಸ್ಥರು ಇದೀಗ ಸ್ವಂತ ಹಣದಿಂದ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ..

raichur
ಹದಗೆಟ್ಟ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು
author img

By

Published : Jul 7, 2021, 4:13 PM IST

ರಾಯಚೂರು : ಕಳೆದ 2 ವರ್ಷಗಳಿಂದ ಹದ್ದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಮನವಿಗೆ ಸ್ಪಂದಿಸಿದ ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮಸ್ಥರು ಇದೀಗ ಸ್ವಂತ ಹಣದಿಂದ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಹದಗೆಟ್ಟ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉದ್ಬಾಳ(ಯು)ನಿಂದ ಹಸಮಕಲ್ ರಸ್ತೆ ಹದ್ದಗೆಟ್ಟಿತ್ತು. ಇದರಿಂದ ಗ್ರಾಮಸ್ಥರು ನಿತ್ಯ ಓಡಾಡುವಾಗ ತೊಂದರೆ ಅನುಭವಿಸುತ್ತಿದ್ದರು. ಸಂಬಂಧಿಸಿದ ಅಧಿಕಾರಿಗಳು ತಮ್ಮ ಕೂಗಿಗೆ ಸ್ಪಂದಿಸದೇ ಇರುವುದರಿಂದ ಗ್ರಾಮಸ್ಥರೇ ಹಣ ಸಂಗ್ರಹಿಸುವ ಮೂಲಕ 10 ಟಿಪ್ಪರ್, 4 ಟ್ರ್ಯಾಕ್ಟರ್, 2 ಹಿಟಾಚಿ ಹಾಗೂ 20 ಜನ ಕಾರ್ಮಿಕರಿಂದ ಸುಮಾರು 3.5 ಕಿ.ಮೀ.ವರೆಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ.

ಈ ಕಾರ್ಯಕ್ಕೆ ಪ್ರಮುಖವಾಗಿ ಗ್ರಾಮದ ಯಂಕಣ್ಣ ಕಮತರ್, ವೀರೇಶ್, ರುದ್ರಗೌಡ, ಅಂಬರೀಷ್ ಗೌಡ, ಶಂಕರ್ ರಾವ್ ಕುಲಕರ್ಣಿ, ಮಹಾಂತೇಶ್ ಸ್ವಾಮಿ ಕಡಾಮುಡಿ ಮಠ, ಅಜಯ್ ನಾಡಗೌಡ ಕಂಟೆಪ್ಪ ನಾಯಕ್, ದೊಡ್ಡ ರಾಮಯ್ಯ ನಾಯಕ್, ಚಂದ್ರಶೇಖರ್ ನಾಯಕ್, ಬಸವರಾಜ್ ಕಮತರ್, ವೇಗೇಶ್ ಪಾಟೀಲ್ ಚಂದನಗೌಡ ಗೌಡರ್, ರಾಘವೇಂದ್ರ ಗುತ್ತೇದಾರ್ ಹಾಗೂ ಊರಿನ ಗ್ರಾಮಸ್ಥರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಮಾನವೀಯತೆ ಮರೆತ ದುರುಳರು : ಬೀದಿ ನಾಯಿಗಳಿಗೆ ವಿಷ ಆಹಾರ ನೀಡಿ ಕೊಂದ ದುಷ್ಟರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.