ರಾಯಚೂರು: ಸುದೀರ್ಘ 34 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಮರಳಿದ ವೀರಯೋಧನನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ ಗೌರವ ಸಲ್ಲಿಸಿದರು.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಟ್ಟೂರು ಗ್ರಾಮದ ಪಂಪಣ್ಣ.ಎ.ಜಾವೂರು, ಸೇನಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ವೀರಯೋಧನನ್ನು ಕುದುರೆ ಮೇಲೆ ಗ್ರಾಮದ ಪ್ರಮುಖ ಬಡಾವಣೆಗಳ ರಸ್ತೆ ಮೇಲೆ ಬ್ಯಾಂಡ್ ಮೇಳದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ, ಕುಣಿದು, ಕುಪ್ಪಳಿಸಿದರು. ನಂತರ ಕಾರ್ಯಕ್ರಮ ಆಯೋಜಿಸಿ ಯೋಧನನ್ನು ಸನ್ಮಾನಿಸಿ ಗೌರವಿಸಲಾಯಿತು.
ಓದಿ: ಮಾ.12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ
ಪ್ರಾಣವನ್ನೂ ಲೆಕ್ಕಿಸದೆ ಕಳೆದ 34 ವರ್ಷಗಳಿಂದ ದೇಶ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧನನ್ನು ಬಾರಮಾಡಿಕೊಳ್ಳಲು ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.