ರಾಯಚೂರು: 2023-24ನೇ ಸಾಲಿನ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯ ಸದ್ಯದಲ್ಲೇ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಂಡರ್-16 ತಂಡವನ್ನು ಉಪ ನಾಯಕನಾಗಿ ಮುನ್ನಡೆಸುವ ಅವಕಾಶ ರಾಯಚೂರಿನಲ್ಲಿ ಹುಡುಗ ಅನಿಕೇತ ರೆಡ್ಡಿ ಅವರಿಗೆ ಲಭಿಸಿದೆ. ಇವರು ಸೈಬರ್ ಕ್ರೈಮ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ವಿಕ್ರಮರೆಡ್ಡಿ ಎಂಬವರ ಪುತ್ರ. 2023 ಡಿಸೆಂಬರ್ 1ರಿಂದ 23ರವರೆಗೆ ವಿಜಯವಾಡದಲ್ಲಿ ಟೂರ್ನಿ ನಡೆಯಲಿದೆ.
ದ್ರಾವಿಡ್ ಮಗ ನಾಯಕ: ಭಾರತ ಕ್ರಿಕೆಟ್ ತಂಡ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಈ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ. ಅನ್ವಯ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ದ್ರಾವಿಡ್ ಏಕದಿನ ಮತ್ತು ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟರ್ ಆಗಿದ್ದವರು. ಅನ್ವಯ್ ಸಹೋದರ ಸಮಿತ್ ಕೂಡ ಕ್ರಿಕೆಟಿಗರಾಗಿದ್ದಾರೆ. ಸಮಿತ್ 2019-20ರಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಎರಡು ದ್ವಿಶತಕ ಗಳಿಸಿ ಗಮನ ಸೆಳೆದಿದ್ದರು. ಅಂಡರ್-14 ಮಟ್ಟದಲ್ಲೂ ಸಮಿತ್ ವಿಶಿಷ್ಟ ಗುರುತು ಹೊಂದಿದ್ದಾರೆ.
ದ್ರಾವಿಡ್ ತರಬೇತುದಾರರಾಗಿರುವ ಟೀಂ ಇಂಡಿಯಾ ವಿಶ್ವಕಪ್ ಕ್ರಿಕೆಟ್ ಅಭಿಯಾನದುದ್ದಕ್ಕೂ ಮಿಂಚಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನಪ್ಪಿತ್ತು. ಈ ಮೂಲಕ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶ ಮಿಸ್ ಮಾಡಿಕೊಂಡಿತ್ತು. ಸದ್ಯ ಭಾರತ-ಆಸೀಸ್ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ 1-0 ಅಂತರದಿಂದ ಭಾರತ ಮುನ್ನಡೆ ಸಾಧಿಸಿದೆ.
ಕರ್ನಾಟಕ ತಂಡ U16 ತಂಡ: ಅನ್ವಯ್ ದ್ರಾವಿಡ್ (ನಾಯಕ ಮತ್ತು ವಿಕೆಟ್ ಕೀಪರ್), ಅನಿಕೇತ್ ರೆಡ್ಡಿ (ಉಪ ನಾಯಕ), ತಲ್ಹಾ ಶರೀಫ್, ರೋಹನ್ ಮೊಹಮ್ಮದ್, ಪಾರ್ಥ ಆರ್, ಶಿವ ಆರ್, ಅಮೋಘ ಆರ್ ಶೆಟ್ಟಿ, ಮಿಲನ್ ಧಾಮಿ, ಧ್ಯಾನ್ ಎಂ.ಹಿರೇಮಠ, ಪ್ರದ್ಯುಮ್ನ ಎ.ಎನ್., ವೈಭವ್ ಸಿ, ಸಾಯಿ ಕೃತಿನ್ ಯೆಡಿಡಿ, ರೋಹಿತ್ ಎ.ಎ., ತೇಜಸ್ ಆರ್ ನಾಯಕ್, ಆರ್ಯ ಜೆ.ಗೌಡ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್‌ಗೆ 6 ವರ್ಷ ನಿಷೇಧ ಶಿಕ್ಷೆ