ETV Bharat / state

ವೈದ್ಯರು ಬರ್ತಿಲ್ಲ, ಚಿಕಿತ್ಸೆ ನೀಡ್ತಿಲ್ಲ.. ಸಾವಿಗೂ ಮುನ್ನ ಸೋಂಕಿತ ಮಾಡಿದ್ದ ವಿಡಿಯೋ ವೈರಲ್​​​

ರಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಓಪೆಕ್​ ಆಸ್ಪತ್ರೆಯಲ್ಲಿ ಬಸನಗೌಡ ಎಂಬುವವರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಮೂರು ದಿನವಾದರೂ ವೈದ್ಯರು ಬಂದಿರಲಿಲ್ಲ ಅಂತ ಆರೋಪಿಸಿದ್ದ. ಬೆಡ್ ಕೊಟ್ಟು ಆಕ್ಸಿಜನ್ ವ್ಯವಸ್ಥೆ ಮಾತ್ರ ಮಾಡಿದ್ದರು, ಮೆಡಿಸಿನ್ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದ್ದರು.

video-gone-viral-corona-patient-alleges-hospital-doesnt-treat-him-well
ಸಾವಿಗೂ ಮುನ್ನ ಸೋಂಕಿತ ಮಾಡಿದ್ದ ವಿಡಿಯೋ ವೈರಲ್​​​
author img

By

Published : May 11, 2021, 6:07 PM IST

ರಾಯಚೂರು: ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಅಂತ ವಿಡಿಯೋ ಮಾಡಿದ್ದ ವ್ಯಕ್ತಿ ಸಾವನಪ್ಪಿದ್ದು, ಆತ ಸಾವಿಗೂ ಮುನ್ನ ಮಾಡಿದ್ದ ವಿಡಿಯೋ ಈಗ ವೈರಲ್‌ ಆಗಿದೆ.

ಯಾದಗಿರಿ ಜಿಲ್ಲೆ ಸುರಪುರ ತಾ. ಸೂಗೂರು ಗ್ರಾಮದ ಬಸನಗೌಡ(46) ಮೃತ ಸೋಂಕಿತ. ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ, ವೈದ್ಯರು ಸರಿಯಾಗಿ ಬರುತ್ತಿಲ್ಲ. ಸಂಬಂಧಪಟ್ಟವರು ಗಮನಹರಿಸಿ ನನಗೆ ಚಿಕಿತ್ಸೆ ಕೊಡಿಸಬೇಕು ಅಂತ ಮನವಿ ಮಾಡಿದ್ದ.

ಸಾವಿಗೂ ಮುನ್ನ ಸೋಂಕಿತ ಮಾಡಿದ್ದ ವಿಡಿಯೋ

ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಓಪೆಕ್​ ಆಸ್ಪತ್ರೆಯಲ್ಲಿ ಬಸನಗೌಡನನ್ನು ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಮೂರು ದಿನವಾದರೂ ವೈದ್ಯರು ಬಂದಿರಲಿಲ್ಲ ಅಂತ ಆರೋಪಿಸಿದ್ದ. ಬೆಡ್ ಕೊಟ್ಟು ಆಕ್ಸಿಜನ್ ವ್ಯವಸ್ಥೆ ಮಾತ್ರ ಮಾಡಿದ್ದರು, ಮೆಡಿಸಿನ್ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ ಓಪೆಕ್ ಆಸ್ಪತ್ರೆಯಿಂದ ಹೊರಬಂದು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಸಾವ್ನಪ್ಪಿದ್ದಾರೆ. ಆತ ಸಾವಿನ ಮುನ್ನ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.