ರಾಯಚೂರು: ಹಾಲ್ ಟಿಕೆಟ್ ನೀಡಿದ ಕಾರಣ ವಿದ್ಯಾರ್ಥಿಯೋರ್ವನ ಆತ್ಮಹತ್ಯೆ ಕಾರಣವಾದ ಖಾಸಗಿ ಕಾಲೇಜಿನ ಅನುಮತಿ ರದ್ದುಪಡಿಸುವಂತೆ ಹೈದರಾಬಾದ್-ಕರ್ನಾಟಕ ಪ್ರದೇಶ ವಾಲ್ಮೀಕ ಸಂಘಟನೆ ಒತ್ತಾಯಿಸಿದೆ.
ರಾಯಚೂರಿನ ಪ್ರತಿಕಾಭವನದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಮಾನವಿ ಪಟ್ಟಣದ ಲೋಯೊಲೋ ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಹಾಲ್ ಟಿಕೆಟ್ ನೀಡದಿರುವುದಕ್ಕೆ ಮನನೊಂದು ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.
ಆದ್ರೆ ಈ ಪ್ರಕರಣವನ್ನ ಮಾನವಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣವನ್ನ ದಾಖಲಿಸಲಾಗಿದೆ. ಆದ್ರೆ ವಿದ್ಯಾರ್ಥಿ ಸಾವಿಗೆ ಕಾಲೇಜು ನೇರ ಕಾರಣವಾಗಿರುತ್ತದೆ. ವಿದ್ಯಾರ್ಥಿ ಹಾಜರಾತಿ ಕಡಿಮೆ ಇರುವ ಕಾರಣ ಹಾಲ್ ಟಿಕೆಟ್ ಬಂದಿಲ್ಲ ಎಂದು ಕಾಲೇಜು ಹೇಳುತ್ತಿದೆ. ಆದ್ರೆ ಹಾಲ್ ಟಿಕೆಟ್‌ನ್ನು ವಿವಿಯಿಂದ ಕಳುಹಿಸಲಾಗುತ್ತದೆ. ಹಾಜರಾತಿ ಕಡಿಮೆಯಿದ್ದರೆ ಹಾಲ್ ಟಿಕೆಟ್ ಬರುತ್ತದೆ ಎನ್ನುವುದು ಒಂದು ಕಡೆಯಾದ್ರೆ, ಒಂದು ಬಾರಿ ಬಂದ ಹಾಲ್ ಟಿಕೆಟ್ ವಿದ್ಯಾರ್ಥಿಗೆ ನೀಡಬೇಕು. ಆದ್ರೆ ಕಾಲೇಜು ಆಡಳಿತ ನಿರಾಕರಣೆ ಮಾಡಿದೆ ಎಂದು ದೂರಿದ್ದಾರೆ.
ಹೀಗಾಗಿ ಕೂಡಲೇ ಇಂತಹ ಕಾಲೇಜು ಮಾನ್ಯತೆ ರದ್ದುಗೊಳಿಸಬೇಕು. ವಿದ್ಯಾರ್ಥಿ ಸಾವಿಗೆ ಕಾರಣವಾದವರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.