ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಜನ ಜೀವನ ಯಥಾಸ್ಥಿತಿಗೆ ಮರಳಿದೆ.
ಬೆಳಗ್ಗೆಯಿಂದ ತರಕಾರಿ, ಹಾಲು, ಕಿರಾಣಿ ಅಂಗಡಿ ತೆರೆಯಲಾಗಿದ್ದು, ಜನರು ತಮಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡು ಬಂತು. ಅಲ್ಲದೇ ಬಸ್ ಸಂಚಾರ ಕೂಡ ಆರಂಭವಾಗಿದೆ.
ಬಸ್ ಸಂಚಾರ ಆರಂಭಿಸಿದ್ದರೂ, ಬೆರಳಿಕೆಯಷ್ಟು ಜನ ಮಾತ್ರ ನಿಲ್ದಾಣಕ್ಕೆ ಬರುತ್ತಿದ್ದರು. ಇದರಿಂದ ಜನರಿಲ್ಲದೆ ಬಸ್ಗಳು ಖಾಲಿ ಖಾಲಿಯಾಗಿದ್ದವು. ಆದರೆ ನಿಲ್ದಾಣದಲ್ಲಿ ಸಿಬ್ಬಂದಿಯೇ ಹೆಚ್ಚಾಗಿ ಕಂಡು ಬಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೀಗ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಎಂದಿನಂತೆ ಜನಜೀವನ ಪ್ರಾರಂಭವಾಗಿದೆ.