ರಾಯಚೂರು: ಜಿಲ್ಲೆಯ ಕೃಷ್ಣ ನದಿಗೆ ಹಾರಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ಗಡಿ ಭಾಗದ ತೆಲಂಗಾಣಕ್ಕೆ ಹೊಂದಿಕೊಂಡಿರುವ ಕೃಷ್ಣ ಗ್ರಾಮದ ಬಳಿಯ ಬ್ರಿಡ್ಜ್ ಬಳಿ ಈ ದುರ್ಘಟನೆ ಸಂಭವಿಸಿದೆ. ಪಿ.ರಾಮಕೃಷ್ಣ ರಾಜು(28), ಶ್ರೀಹರಿ ರಾಜು(25) ಮೃತ ಯುವಕರೆಂದು ಗುರುತಿಸಲಾಗಿದೆ.
ಬೆಳಗಿನ ಜಾವ ಸುಮಾರು 9:30ರ ವೇಳೆಗೆ ನದಿಗೆ ಹಾರಿದ್ದಾರೆ. ನಂತರ ಹಲವು ಗಂಟೆಗಳ ಕಾಲ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದು, ಕೊನೆಗೆ ಯುವಕರ ದೇಹ ಪತ್ತೆಯಾಗಿದೆ. ಆದ್ರೆ ಘಟನೆಗೆ ಮಾತ್ರ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತೆಲಂಗಾಣದ ಕೃಷ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.