ETV Bharat / state

ರಾಯಚೂರು: ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಐವರು ಸಾವು - ಅಪಘಾತ ಪ್ರಕರಣದಲ್ಲಿ ಐವರ ಸಾವು

ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಘಾತ ಸಂಭವಿಸಿದೆ. ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಜರುಗಿದೆ.

ರಾಯಚೂರಲ್ಲಿ ದುರಂತ: ವಿವಿಧ ಅಪಘಾತ ಪ್ರಕರಣದಲ್ಲಿ ಐವರ ಸಾವು

author img

By

Published : Aug 30, 2022, 6:31 PM IST

Updated : Aug 30, 2022, 6:59 PM IST

ರಾಯಚೂರು: ಸಾರಿಗೆ ಬಸ್, ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಅಸುನೀಗಿದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ಗಾಣಧಾಳ‌ ಗ್ರಾಮದ ತಿಕ್ಕಯ್ಯ(50), ಶಿವಣ್ಣ( 50) ಮೃತರೆಂದು ಗುರುತಿಸಲಾಗಿದೆ. ರಸ್ತೆ ಅಪಘಾತ ಸಂಭವಿಸಿದಾಗ ಸಾರಿಗೆ ಬಸ್ ಪಕ್ಕದ ಭತ್ತ ಗದ್ದೆಗೆ ನುಗ್ಗಿದೆ. ಗಾಣಧಾಳ ಗ್ರಾಮದಿಂದ ಜವಳಾಗೇರಾ ತೆರಳಬೇಕಾದ ವೇಳೆ ಮಾರ್ಗ ಮಧ್ಯೆ ದುರ್ಘಟನೆ ನಡೆಯಿತು. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಗಾನೂರು ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕಾರು ನಾಲೆಗೆ ಉರುಳಿ ಮೂವರು ಸಾವಿಗೀಡಾಗಿದ್ದಾರೆ. ಈ ಮೂಲಕ ಜಿಲ್ಲೆಯ ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.

ಹೆಚ್ಚಿನ ಓದಿಗೆ :ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಒಂದೇ ಕುಟುಂಬದ ಮೂವರ ಸಾವು

Last Updated : Aug 30, 2022, 6:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.