ETV Bharat / state

ಬೈಕ್​-ಟ್ರ್ಯಾಕ್ಟರ್​ ಡಿಕ್ಕಿ, ಬಾಲಕ ಸಾವು... ಸಿಸಿಟಿವಿಯಲ್ಲಿ ವಿಡಿಯೋ ಸೆರೆ - ಸಿಸಿಟಿವಿಯಲ್ಲಿ ವಿಡಿಯೋ ಸೆರೆ

ಬೈಕ್​-ಟ್ರ್ಯಾಕ್ಟರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಪರಿಣಾಮ ಸ್ಥಳದಲ್ಲೇ ಓರ್ವ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

tractor hits bike in Raichur
tractor hits bike in Raichur
author img

By

Published : Jul 9, 2020, 4:23 AM IST

Updated : Jul 9, 2020, 9:44 AM IST

ರಾಯಚೂರು: ಬೈಕ್, ಟ್ರ್ಯಾಕ್ಟರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಪರಿಣಾಮ ಬೈಕ್​​ನಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸಿಸಿಟಿವಿಯಲ್ಲಿ ವಿಡಿಯೋ ಸೆರೆ

ಜಿಲ್ಲೆಯ ಸಿಂಧನೂರು ತಾಲೂಕಿನ ಈಜೆ ಹೊಸಳ್ಳಿ ಕ್ಯಾಂಪ್​​ ಬಳಿ ಈ ದುರ್ಘಟನೆ ಸಂಭವಿಸಿದೆ. ನೀತಿನ್ ಸಾಯಿ(14) ಮೃತಪಟ್ಟಿದ್ದು, ಮೃತನ ಅಜ್ಜ ಸುಬ್ಬರಾವ್, ಸಹೋದರಿಗೆ ಗಂಭೀರವಾಗಿ ಗಾಯವಾಗಿದೆ. ಸಾಸಲಮರಿ ಕ್ಯಾಂಪ್​ನಿಂದ ಈಜೆ ಹೊಸಳ್ಳಿ ಕ್ಯಾಂಪ್​ ಕಡೆ ಬೈಕ್​​ ಮೇಲೆ ಸುಬ್ಬರಾವ್ ತನ್ನಿಬ್ಬರು ಮೊಮ್ಮಕ್ಕಳೊಂದಿಗೆ ತೆರಳುತ್ತಿದ್ದರು. ಕ್ಯಾಂಪ್ ಕ್ರಾಸ್​ ಬಳಿ ತಮ್ಮ ಸಂಬಂಧಿಕರನ್ನ ಮಾತನಾಡಿಸಲು ಬೈಕ್​ ಕ್ರಾಸ್​ ಮಾಡಲು ಹೋಗಿದ್ದಾರೆ. ಈ ವೇಳೆ ಸಿಂಧನೂರಿನಿಂದ ಗಂಗಾವತಿ ಕಡೆ ತೆರಳುತ್ತಿದ್ದ ಟ್ಯ್ರಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ ಚಲಾಯಿಸುತ್ತಿದ್ದ ಸುಬ್ಬರಾವ್ ಹಾಗೂ ಆತನ ಮೊಮ್ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಬಾಲಕ ಮೃತಪಟ್ಟಿದ್ದು, ಮ್ಮೊಮ್ಮಗಳು ಮತ್ತು ಸುಬ್ಬರಾವ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತ ಸಂಭವಿಸಿದ ಸ್ಥಳದಿಂದ ಟ್ರ್ಯಾಕ್ಟರ್​​​​​​​​​​​ ಚಾಲಕ ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 9, 2020, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.