ETV Bharat / state

ಆಧುನಿಕತೆಗೆ ಸಿಲುಕಿ ಸುಸ್ತಾದ ಎತ್ತಿನಬಂಡಿ:   ಇದನ್ನೇ ನಂಬಿದವರ ಬದುಕು ಮೂರಾಬಟ್ಟೆ! - undefined

ರಾಯಚೂರು ನಗರದಲ್ಲಿ ಕೆಲ ವರ್ಷಗಳ ಹಿಂದೆ ಸುಮಾರು 2 ಸಾವಿರ ಎತ್ತಿನ ಬಂಡಿಗಳಿದ್ದವು. ಆದರೆ, ಈಗ ಕೇವಲ ಅಂದಾಜು 70-80 ಇರಬಹುದು. ಇದರಿಂದ ಎತ್ತಿನ ಬಂಡಿಗಳನ್ನೇ ನೆಚ್ಚಿಕೊಂಡಿರುವ ಕಾರ್ಮಿಕರ ಸ್ಥಿತಿ ಮಾತ್ರ ಮೂರಾ ಬಟ್ಟೆಯಾಗಿದೆ.

ರಾಯಚೂರು ನಗರದಲ್ಲಿ ಕಂಡುಬಂದ ಎತ್ತಿನ ಬಂಡಿ
author img

By

Published : Apr 25, 2019, 1:39 PM IST

ರಾಯಚೂರು: ಕಳೆದ ಕೆಲ ವರ್ಷಗಳ ಹಿಂದೆ ಸಾವಿರಾರು ಎತ್ತಿನ ಬಂಡಿಗಳು ನಗರ ಪ್ರದೇಶಗಳಲ್ಲಿ ಕಾಣಸಿಗುತ್ತಿತ್ತು. ಅಷ್ಟೇ ಅಲ್ಲದೇ, ರಸ್ತೆಯ ಯಾವ ಭಾಗದಲ್ಲಾದರೂ ಒಮ್ಮೆ ಕಣ್ಣು ಹಾಯಿಸಿದರೆ ಸರಕು ಸಾಗಣೆ ಮಾಡುವ ಎತ್ತಿನ ಬಂಡಿಗಳು ಕಂಡುಬರುತ್ತಿತ್ತು. ಆದರೆ, ಅವುಗಳು ಇಂದು ಅವನತಿಯತ್ತ ಸಾಗುತ್ತಿದ್ದು, ಬಂಡಿಯನ್ನೇ ನಂಬಿ ಜೀವನ ನಡೆಸುವ ಕಾರ್ಮಿಕರ ಸ್ಥಿತಿ ಡೋಲಾಯ ಮಾನವಾಗಿದೆ.

ರಾಯಚೂರು ನಗರದಲ್ಲಿ ಕಂಡುಬಂದ ಎತ್ತಿನ ಬಂಡಿ

ನಾಗರಿಕತೆ ಬೆಳೆದಂತೆಲ್ಲ ಜೀವನ‌ಶೈಲಿಯ ಜೊತೆಗೆ ಕೆಲಸ ಮಾಡುವ ಸಾಧನ, ಸಂಚಾರ ವ್ಯವಸ್ಥೆ, ವ್ಯವಹಾರದಲ್ಲಿಯೂ ಬದಲಾವಣೆಗುತ್ತದೆ. ಹಿಂದೆ ರಾಯಚೂರು ನಗರದ ಜಲಾಲ್​ನಗರ, ಹರಿಜನವಾಡ, ಸಿಯಾತಲಾಬ್, ಮಡ್ಡಿಪೇಟೆ ಹೀಗೆ ಮತ್ತಿತರ ಬಡಾವಣೆಗಳ ಜನರು ಎತ್ತಿನ ಬಂಡಿಯಲ್ಲಿ ಭತ್ತ, ಶೇಂಗಾದ ಹೊಟ್ಟು, ಅಕ್ಕಿ, ಗೋಧಿ, ಕಿರಾಣಿ ಸಾಮಗ್ರಿಗಳನ್ನು ಸಾಗಣೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಹಲವಾರು ಕುಟುಂಬಗಳ ನಿರ್ವಹಣೆಗೆ ಎತ್ತಿನಬಂಡಿಗಳು ಆಸರೆಯಾಗಿದ್ದವು. ಆದ್ರೆ ಈಗ ಟಾಟಾ ಏಸ್, ಆಪಿ ಆಟೋ ಹಾಗೂ ಇತರ ವಾಹನಗಳ ಸಂಚಾರದಿಂದ ಎತ್ತಿನ ಬಂಡಿಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಜೊತೆಗೆ ಎತ್ತಿನ ಬಂಡಿಗಳಿಂದಲೇ ಜೀವನ ಸಾಗಿಸುತ್ತಿದ್ದ ಕಾರ್ಮಿಕರ ಸ್ಥಿತಿ ಹದಗೆಟ್ಟಿದೆ.

ನಗರದಲ್ಲಿ ಕೆಲ ವರ್ಷಗಳ ಹಿಂದೆ ಸುಮಾರು 2 ಸಾವಿರ ಎತ್ತಿನ ಬಂಡಿಗಳಿದ್ದವು. ಆದರೆ, ಈಗ ಕೇವಲ ಅಂದಾಜು 70-80 ಇರಬಹುದು. ಈ ಹಿಂದೆ ಎತ್ತಿನ‌ಬಂಡಿಗಳ ಮೂಲಕ ವಿವಿಧ ವಸ್ತುಗಳ ಸಾಗಣೆ ಮಾಡುವುದರಿಂದ ನೂರಾರು ಕಾರ್ಮಿಕರಿಗೆ ಉದ್ಯೋಗ ದೊರೆತು ಕೈ ತುಂಬ ಹಣ ಗಳಿಸುವ ಮಾರ್ಗವಾಗಿ ಅವರಿಗೆ ಆಸರೆಯಾಗಿತ್ತು. ಆದರೆ, ಈಗ ಎತ್ತಿನ ಬಂಡಿಗಳನ್ನೇ ನೆಚ್ಚಿಕೊಂಡಿರುವ ಕಾರ್ಮಿಕರ ಸ್ಥಿತಿ ಮೂರಾಬಟ್ಟೆಯಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಎತ್ತಿನ ಬಂಡಿ ಕಾರ್ಮಿಕರು, ವರ್ಷದಲ್ಲಿ ಕೇವಲ 7-8 ತಿಂಗಳು‌ ಸೀಸನ್‌ ಇದ್ದು ಉಳಿದ ದಿನಗಳಲ್ಲಿ ಕೆಲಸವಿಲ್ಲದೇ ಮನೆಯಲ್ಲಿರಬೇಕು. ಗಟ್ಟಿಮುಟ್ಟಾಗಿರುವ ಯುವಕರು ಹೊಲ ಗದ್ದೆಗಳಲ್ಲಿ ದುಡಿಯುತ್ತಾರೆ. ಅದ್ರೆ ವಯಸ್ಸಾದವರೂ ಸುಮ್ಮನೇ ಕಾಲ ಕಳೆಯಬೇಕು. ಅಷ್ಟೇ ಅಲ್ಲದೆ, ಭತ್ತದ ಚೀಲ ಒಂದಕ್ಕೆ ನಾವೇ ಲೋಡ್ ಮಾಡಿಕೊಂಡು ಗೋದಾಮುಗಳಿಗೆ ಸಾಗಣೆ ಮಾಡಿ, ಅನ್ಲೋಡ್ ಮಾಡಿದರೆ ಒಂದು ಚೀಲಕ್ಕೆ ರೂ.10 ಕೊಡುತ್ತಾರೆ. ಹೀಗೆ ಸುಮಾರು 60-70 kg ಭಾರ ಹೊರಬೇಕು. ಶೇಂಗಾದ ಹೊಟ್ಟಿಗೆ 5 ರೂ. ಕೊಡುತ್ತಾರೆ. ಇದರಿಂದ ದಿನಕ್ಕೆ 300 -350ರೂ. ಗಳಿಸಬಹುದು. ಎತ್ತಿಗೆ 100ರೂ.ಗಳಂತೆ ಮೇವಿಗೆ ಖರ್ಚಾದರೆ 200-250ರೂ. ಕೂಲಿ ಬೀಳಲಿದೆ. ಇಷ್ಟರಲ್ಲಿಯೇ ನಮ್ಮ ಜೀವನ ನಡೆಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.

Intro:ಆಧುನಿಕ ಕಾಲವಾದ ಇಂದು ವಾಹನಗಳ ಬಳಕೆಯಿಂದಾಗಿ ಎತ್ತಿನ ಬಂಡಿಗಳ ಬಳಕೆ ಕಡಿಮೆಯಾಗುತ್ತಿದ್ದು, ರಾಯಚೂರಿನ ಎತ್ತಿನ ಬಂಡಿಯ ಆಧರದ ಮೇಲೆ ಜೀವನ ನಡೆಸುತ್ತಿರುವ ಕಾರ್ಮಿಕರ ಸ್ಥಿತಿ ಡೋಳಾಯಮಾನವಾಗಿ ಮಾರ್ಪಟ್ಟಿದೆ.
ಈ ಎತ್ತಿನ ಬಂಡಿ ಹಮಾಲಿ ಕಾರ್ಮಿಕರ ಗೋಳು ಈಗ ಕೇಳುವವರು ಇಲ್ಲದಂತಾಗಿದೆ.

Body:ಹೌದು,ಒಂದು ಕಾಲದಲ್ಲಿ ಸಾವಿರಾರು ಎತ್ತಿನ ಬಂಡಿಗಳು ನಗರದಲ್ಲಿ ಕಾಣ ಸಿಗುತ್ತಿತ್ತು.ರಸ್ತೆಯ ಯಾವ ಭಾಗದಲ್ಲಿ ದೃಷ್ಟಿ ಹಾಯಿಸಿದರೂ ಸರಕು ಸಾಗಣೆ ಮಾಡಲು ಎತ್ತಿನ ಬಂಡಿಗಳು ಆಸರೆಯಾಗಿದ್ದವು.ಇದು ಹಲವಾರು ಜನರ ತುತ್ತಿನ ಚೀಲ ತುಂಬಿಸುವ ಸಾಧನವೂ ಅಗಿತ್ತು.
ಆದ್ರೆ ಈಗ ಕಾಲ ಬದಲಾಗಿದೆ.ನಾಗರಿಕತೆ ಬೆಳೆದಂತೆಲ್ಲ, ಜೀವನ‌ಶೈಲಿಯ ಜೊತೆಗೆ ಕೆಲಸ ಮಾಡುವ ಸಾಧನ,ಸಂಚಾರ, ವ್ಯವಹಾರದಲ್ಲಿಯೂ ಬದಲಾವಣೆಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ರಾಯಚೂರು ನಗರದ ಜಲಾಲ್ ನಗರ, ಹರಿಜನವಾಡ, ಸಿಯಾತಲಾಬ್,ಮಡ್ಡಿ ಪೇಟೆ ಮತ್ತಿತರೆ ಬಡಾವಣೆಗಳ ಸಾವಿರಾರು ಜನರು ಎತ್ತಿನ ಬಂಡೆಯಲ್ಲಿ ಭತ್ತ,ಶೇಂಗದ ವಟ್ಟು, ನ್ಯಾಯಬೆಲೆ ಅಂಗಡಿಯ ಅಕ್ಕಿ,ಗೋಧಿ ಇತರೆ ರೇಶನ್ ,ಕಿರಾಣಿ ಸಮಾನು ಸೇರಿದಂತೆ ವಿವಿಧ ಸರಕು ಗೋದಾಮು ಮತ್ತಿತರೆ ಸ್ಥಳಗಳಿಗೆ ಸಾಗಣೆ ಮಾಡಲು ಎತ್ತಿನ ಬಂಡಿಗಳೇ ಅನಿವಾರ್ಯ ವಾಗಿತ್ತು.ಇದರಿಂದ ಹಲವಾರು ಕುಟುಂಬಗಳ ನಿರ್ವಹಣೆಗೆ ಎತ್ತಿನಬಂಡಿಗಳು ಅಸರೆಯಾಗಿದ್ದವು.
ಆದ್ರೆ ಈಗ ಟಾಟಾ ಎಸ್,ಅಪ್ಪಿ ಆಟೋ ಸೇರಿ ಇತರೆ ವಾಹನಗಳ ಸಂಚಾರದಿಂದ ಎತ್ತಿನ ಬಂಡಿಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ ಜೊತೆಗೆ ಎತ್ತಿನ ಬಂಡಿಗಳಿಂದಲೇ ಜೀವನ ಸಾಗುತ್ತಿದ್ದ ಕಾರ್ಮಿಕರ ಸ್ಥಿತಿ ಡೋಳಾಯಮಾನಕ್ಕೆ ತಲುಪಿದೆ.
ನಗರದಲ್ಲಿ ಕೆಲ ವರ್ಷಗಳ ಹಿಂದೆ 2 ಸಾವಿರ ಎತ್ತಿನ ಬಂಡಿ ಗಳಿದ್ದವು ಈಗ ಕೇವಲ ಅಂದಾಜು 70-80 ಇರಬಹುದು.
ಹಿಂದೆ ಎತ್ತಿನ‌ಬಂಡಿಗಳ ಮೂಲಕ ವಿವಿಧ ವಸ್ತುಗಳ ಸಾಗಣೆ ಮಾಡುವುದರಿಂದ ನೂರಾರು ಕಾರ್ಮಿಕರಿಗೆ ಉದ್ಯೋಗ ದೊರೆತು ಕೈತುಂಬ ಹಣ ಗಳಿಸುವ ಮಾರ್ಗವಾಗಿ ಜೀವನೋಪಾಯಕ್ಕಾಗಿ ಆಸರೆಯಾಗಿತ್ತು.
ಈಗ ಎತ್ತಿನ ಬಂಡಿಗಳನ್ನೇ ನೆಚ್ಚಿಕೊಂಡಿರುವ ಕಾರ್ಮಿಕರ ಸ್ಥಿತಿ ಮೂರಾಬಟ್ಟೆಯಾಗಿದೆ ವರ್ಷದಲ್ಲಿ ಕೇವಲ 7-8 ತಿಂಗಳು‌ ಸೀಸನ್‌ ಇದ್ದು ಉಳಿದ ದಿನಗಳಲ್ಲಿ ಕೆಲಸವಿಲ್ಲದೇ ಮನೆಯಲ್ಲಿರಬೇಕು. ಗಟ್ಟಿಮುಟ್ಟಾಗಿರುವ ಕೆಲವರು ಹೊಲ ಗದ್ದೆಗಳಲ್ಲಿ ದುಡುಯುತ್ತಾರೆ ಅದ್ರೆ ವಯಸ್ಸಾದವರೂ ಸುಮ್ಮನೇ ಕಾಲ ಕಳೆಯಬೇಕು ಇದರಿಂದ ಜೀವನ‌ನಡೆಸಲು ಕಷ್ಟವಾಗಿದೆ ಎನ್ನುತ್ತಾರೆ ಎತ್ತಿನ ಬಂಡಿ ಓಡಿಸುವ ಕಾರ್ಮಿಕರು.
ಈಗ ಭತ್ತದ ಚೀಲ ಒಂದಕ್ಕೆ ನಾವೇ ಲೋಡ್ ಮಾಡಿಕೊಂಡು ಗೋದಾಮುಗಳಿಗೆ ಸಾಗಣೆ ಮಾಡಿ ನಾವೇ ಅನ್ಲೋಡ್ ಮಾಡಿದರೆ ಚೀಲ ಒಂದಕ್ಕೆ ರೂ.10 ಕೊಡುತ್ತಾರೆ.ಸುಮಾರು 60-70 kg ಭಾರ ಹೊರಬೇಕು,ಶೇಂಗದ ವಟ್ಟುಗೆ 5 ರೂ ಕೊಡುತ್ತಾರೆ ಇದರಿಂದ ದಿನ 300 -350 ಗಳಿಸಬಹುದು ಎತ್ತಿಗೆ 100 ಮೇವಿಗೆ ಖರ್ಚಾದರೆ 200-250 ಕೂಲಿ ಬೀಳಲಿದೆ ಇಷ್ಟ ರಲ್ಲಿಯೇ ಜೀವನ ನಡೆಸಬೇಕು ಇದರುಂದ ಮಕ್ಕಳ ಶಿಕ್ಷಣ ಇತರೆ ಖರ್ಚುವೆಚ್ಚ ತೆಗೆಯಲು ಆಗದೇ ಶಿಕ್ಷಣದಿಂದ ವಂಚಿತರನ್ನಾಗಿಸಬೇಕಾಗಿದೆ ಎಂದು ಅಲವತ್ತುಕೊಂಡರು
ಏನೇ ಅದರೂ ಸುಮಾರು‌ ವರ್ಷಗಳಿಂದಲೂ ಮುಖ್ಯ ವೃತ್ತಿಯಾಗಿ ಇಂದಿಗೂ ಮುಂದುವರೆಸಿಕಿಂಡು ಹೊಗುತ್ತಿರುವ ನುರಾರು ಕಾರ್ಮಿಕರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಇವರಿಗೆ ನಾಯಕರು,ಸಂಘಟನೆಗಳು ಗೊತ್ತಿಲ್ಲದ ಕಾರಣ ಇವರ ಧ್ವನಿ ಸರಕಾರಕ್ಕೆ ಕೇಳದಂತಾಗಿದೆ ಈಗಲಾದರೂ ಸರಕಾರ ಎಚ್ಚೆತ್ತು ಸಹಾಯ ಹಸ್ತ ನೀಡಬೇಕಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.