ರಾಯಚೂರು: ಬೇಸಿಗೆ ಕಾಲ ಸಿಕ್ಕಪಟ್ಟೆ ಸೆಕೆ ಅಂತ ಮನೆಯವರೆಲ್ಲಾ ಮನೆ ಮಹಡಿ ಮೇಲೆ ಮಲಗಿರುವ ವಿಚಾರವನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ನಗ ನಾಣ್ಯ ದೋಚಿದ್ದಾರೆ.
ಲಿಂಗಸೂಗೂರು ತಾಲೂಕಿನ ಸರ್ಜಾಪೂರು ಗ್ರಾಮದ ಮೂರು ಮನೆಗಳಲ್ಲಿ ಕಳೆದ ತಡರಾತ್ರಿ ಈ ಕಳ್ಳತನ ಪ್ರಕರಣ ನಡೆದಿದೆ.
ಗ್ರಾಮದ ನಿವಾಸಿಗಳಾದ ತಿಮ್ಮಣ್ಣ ದೇವರಗುಡಿ ಮನೆಯಲ್ಲಿ 22 ತೊಲ ಚಿನ್ನಾಭರಣ, 40 ಸಾವಿರ ರೂಪಾಯಿ, ಹನುಮಂತ ಮತ್ತು ಮಹಾದೇವ ಎನ್ನುವರ ಮನೆಯಲ್ಲಿ 19 ಸಾವಿರ ರೂಪಾಯಿ ನಗದು ಮತ್ತು 2 ತೊಲ ಚಿನ್ನಾಭರಣ ಕಳವು ಮಾಡಿರುವ ಖದೀಮರು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.