ರಾಯಚೂರು: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಖದೀಮರು 70 ಗ್ರಾಂ ಬಂಗಾರ,200 ಗ್ರಾಂ ಬೆಳ್ಳಿ ಸೇರಿ 10 ಸಾವಿರ ನಗದು ದೋಚಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಎಲ್.ಬಿ.ಎಸ್.ನಗರ ವ್ಯಾಪ್ತಿಯ ಅಲ್ಲಮಪ್ರಭು ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಎಸ್.ಪಿ. ನರಸಪ್ಪ ಎಂಬುವವರ ಮನೆಯಲ್ಲಿ ಚೆನ್ನಪ್ಪ ಬಾಡಿಗೆಯಿದ್ದರು. ಚೆನ್ನಪ್ಪ ಊರಿಗೆ ತೆರಳಿದ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.